
‘ರಿನ್ಯೂ ಆಂಡ್ ರಿವೈವ್’ ಅಕ್ಯುಪೇಶನಲ್ ತೆರಪಿ ಕ್ಲಿನಿಕ್ ಕಾರ್ಯಾರಂಭ
Wednesday, March 19, 2025
ಮಂಗಳೂರು: ನಗರದ ಯೆಯ್ಯಾಡಿಯಲ್ಲಿರುವ ಕಾರ್ತಿಕಾ ಅಪಾರ್ಟ್‌ಮೆಂಟ್‌ನಲ್ಲಿ ‘ರಿನ್ಯೂ ಆಂಡ್ ರಿವೈವ್’ ಅಕ್ಯುಪೇಶನಲ್ ತೆರಪಿ ಕ್ಲಿನಿಕ್ ಕಾರ್ಯಾರಂಭಗೊಂಡಿದೆ.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಇಲ್ಲಿನ ಪ್ರೊಫೆಸರ್ ಡಾ.ಶೋವಾನ್ ಸಹಾ, ಶ್ರೀನಿವಾಸ್ ಯುನಿವರ್ಸಿಟಿಯ ಅಸೋಸಿಯೇಟ್ ಪ್ರೊಫೆಸರ್ ಡಾ. ಪ್ರೇಮ್ ಕುಮಾರ್, ಡಾ. ವಿಜಯನ್, ಕ್ಲಿನಿಕ್‌ನ ಸಹ ಸಂಸ್ಥಾಪಕ ಡಾ.ವಿನೋತ್ ಕುಮಾರ್ ಮತ್ತು ಡಾ. ಫ್ಲೋರೆನ್ಸ್ ಎ. ಮತ್ತಿತರರು ಉಪಸ್ಥಿತರಿದ್ದರು.
ಸುಸಜ್ಜಿತವಾದ ಈ ಕೇಂದ್ರದಲ್ಲಿ ಆಧುನಿಕ ಚಿಕಿತ್ಸಾ ವ್ಯವಸ್ಥೆಯೊಂದಿಗೆ ಒಂದೇ ಸೂರಿನಡಿ ಆರೋಗ್ಯ ಸೇವೆ ದೊರೆಯಲಿದೆ. ಆರ್ಥೋ ಮತ್ತೂ ನ್ಯೂರೋಗೆ ಸಂಬಂಧಿತ ಸೇವೆಗಳು, ಸ್ವಯಂ ಆರೈಕೆ ತರಬೇತಿ, ಸ್ಪ್ಲಿಂಟ್ ಸಾಧನ ಅಳವಡಿಕೆ ಸೇರಿದಂತೆ ಹಲವು ವಿಧದ ಚಿಕಿತ್ಸೆಗಳು ಈ ಕೇಂದ್ರದಲ್ಲಿ ದೊರೆಯಲಿದೆ. ನುರಿತ ತಜ್ಞರು ಸೂಕ್ತ ತರಬೇತಿ ಮತ್ತು ಚಿಕಿತ್ಸೆ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.