
ಸ್ಕೌಟ್ ಗೈಡ್ಸ್ ಪ್ರಶಸ್ತಿ ಪ್ರದಾನ ಸಮಾರಂಭ
Sunday, March 2, 2025
ಮಂಗಳೂರು: ಭಾರತ ಸ್ಕೌಟ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಕಬ್, ಸ್ಕೌಟ್, ರೋವರ್ ಬುಲ್ ಬುಲ್, ಗೈಡ್, ರೇಂಜರ್ಸ್ ಇವರಿಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ ನಡೆದ ತೃತೀಯಚರಣ, ಸುವರ್ಣಗರಿ, ತೃತೀಯ ಸೋಪಾನ, ನಿಪುಣ ಪರೀಕ್ಷೆಯ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಜಿಲ್ಲಾಧಿಕಾರಿ ನಿವಾಸದಲ್ಲಿ ಭಾನುವಾರ ನೆರವೇರಿತು.
ಜಿಲ್ಲಾಧಿಕಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸ್ಕೌಟ್ ಗೈಡ್ ಸಂಸ್ಥೆಯ ಅಧ್ಯಕ್ಷ ಮುಲ್ಲೈ ಮುಗಿಲನ್ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ವಸಂತ್ ರಾವ್, ಶ್ರೀನಿವಾಸ್ ಪೂಜಾರಿ, ತರಬೇತಿ ಆಯುಕ್ತ ಶಾಂತ ಪ್ರಭು, ವಿವಿಧ ಶಾಲಾ ಕಾಲೇಜುಗಳ ಸ್ಕೌಟರ್, ಗೈಡರ್‌ಗಳು, ಪೋಷಕರು, ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಉಪಸ್ಥಿತರಿದ್ದರು.
ಜಿಲ್ಲಾ ಸ್ಕೌಟ್ ಆಯುಕ್ತ ಮಹಮ್ಮದ್ ತುಂಬೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಪ್ರತಿಮಾ ಕುಮಾರ್ ಸ್ವಾಗತಿಸಿದರು. ಜಿಲ್ಲಾ ಗೈಡ್ ಆಯುಕ್ತೆ ವಿಮಲಾ ರಂಗಯ್ಯ ವಂದಿಸಿದರು.
ಜಿಲ್ಲಾ ಜೊತೆ ಕಾರ್ಯದರ್ಶಿ ಜಯಂತಿ ಸೋನ್ಸ್ ಕಾರ್ಯಕ್ರಮ ನಿರ್ವಹಿಸಿದರು. ರೋವರ್ಸ್ ರೆಂಜರ್ಸ್ ಗಳೊಂದಿಗೆ ಕಚೇರಿ ಸಿಬ್ಬಂದಿಗಳಾದ ಸಂಧ್ಯಾ, ಗಾಯತ್ರಿ, ಲಾವಣ್ಯ ಸಹಕರಿಸಿದರು.