ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವುದಿಲ್ಲ: ಶಾಸಕ ಉಮಾನಾಥ ಕೋಟ್ಯಾನ್

ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವುದಿಲ್ಲ: ಶಾಸಕ ಉಮಾನಾಥ ಕೋಟ್ಯಾನ್

ಮಂಗಳೂರು: ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವ ಮಾತೇ ಇಲ್ಲ. ನನ್ನ ಹೆಸರನ್ನು ವಿನಾಕಾರಣ ಈ ಘಟನೆಯಲ್ಲಿ ಸೇರಿಸಿಕೊಂಡಿದ್ದಾರೆ ಎಂದು ಮೂಲ್ಕಿ-ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.

ಕಿನ್ನಿಗೋಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಯು.ಟಿ. ಖಾದರ್ ಅವರು ನಮ್ಮಲ್ಲಿ ಮಾತುಕತೆ ಬಗ್ಗೆ ತಿಳಿಸಿ ತಪ್ಪು ಒಪ್ಪಿಕೊಂಡರೆ 6 ತಿಂಗಳ ಕಾಲದ ನಿಷೇಧವನ್ನು ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ. 

ಬೇರೆ ಯಾರು ಬೇಕಾದರೂ ತಪ್ಪು ಒಪ್ಪಿಕೊಳ್ಳ, ಬಿಡಲಿ. ಆದರೆ ತಪ್ಪು ಮಾಡದ ನಾನು ಕ್ಷಮೆ ಕೇಳುವುದೇ ಇಲ್ಲ. ಈ ಹಿಂದೆ ಬಿಜೆಪಿ ಸರಕಾರ ಇದ್ದ ಸಂದರ್ಭ ಅಂದಿನ ಸ್ಪೀಕರ್‌ಗೆ ಅಗೌರ ಸಲ್ಲಿಸಿ ಅಪಮಾನ ಮಾಡಿದವರು ಈಗ ದರ್ಪ ಹಾಗೂ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article