ಸಾಹಿತಿಯ ಮಾತುಗಳು ಹೇಳಿಕೆಗಳಾಗಬಾರದು: ಪ್ರೊ. ವಿವೇಕ ರೈ

ಸಾಹಿತಿಯ ಮಾತುಗಳು ಹೇಳಿಕೆಗಳಾಗಬಾರದು: ಪ್ರೊ. ವಿವೇಕ ರೈ


ಮಂಗಳೂರು: ಸಾಹಿತಿಗಳು, ಬರಹಗಾರರು ಕೇವಲ ಹೇಳಿಕೆಗಳನ್ನು ನೀಡಬಾರದು, ಅವರ ಬದುಕು ಪ್ರಾಯೋಗಿಕವಾಗಿರಬೇಕು. ಹಾಗಿದ್ದಾಗ ಮಾತ್ರ ಅವರಿಗೆ ತಮ್ಮ ಬರಹಗಳಲ್ಲಿ ಸಮಾಜವನ್ನು ತಿದ್ದುವ ನೈತಿಕ ಹಕ್ಕು ಇರುತ್ತದೆ ಎಂದು ಪಂಪ ಪ್ರಶಸ್ತಿ ವಿಜೇತ, ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ವಿವೇಕ ರೈ ಹೇಳಿದರು.

ಅವರು ಮಾ.22 ರಂದು ಮಂಗಳೂರಿನ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಆಶ್ರಯದಲ್ಲಿ ಉರ್ವಸ್ಟೋರ್ ಬಳಿಯ ಸಾಹಿತ್ಯ ಸದನದಲ್ಲಿ ಶಶಿಲೇಖಾ ಬಿ. ಅವರ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಶಶಿಲೇಖ ಅವರ ಕೃತಿ ಮತ್ತು ಜೀವನದಲ್ಲಿ ಇಂತಹ ಬದುಕಿನ ಪ್ರಯೋಗಾಶೀಲತೆ ಎದ್ದು ಕಾಣುತ್ತದೆ ಎಂದರು.

‘ಬೆಳಕಿನ ಬೆನ್ನು ಹತ್ತಿ’ ಎಂಬ ಕಥಾ ಸಂಕಲನ, ‘ದೇವಭಾವದ ಹರಿವು’ ಎಂಬ ವೈಚಾರಿಕ ಲೇಖನಗಳ ಸಂಕಲನ ಹಾಗೂ ‘ಮುಂಜಾವದ ಮಾತು’ ಎಂಬ ಆಕಾಶವಾಣಿ ಪ್ರಸಾರಿತ ಚಿಂತನಗಳನ್ನು ಜಾನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಅವರು ಲೋಕಾರ್ಪಣೆಗೊಳಿಸಿದರು.

ಕೃತಿಗಳನ್ನು ಲೋಕಾರ್ಪಣೆಗೊಳಿಸಿದ ಜಾನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಅವರು ಶಶಿಲೇಖ ಅವರ ಕೃತಿಗಳಲ್ಲಿ ಅಪಾರ ಜೀವನ ಅನುಭವ ಮಡುಕಟ್ಟಿದೆ ಎನ್ನುತ್ತಾ ಶುಭ ಹಾರೈಸಿದರು.

ಕಥಾ ಸಂಕಲನದ ಬಗ್ಗೆ ಡಾ. ನರಸಿಂಹಮೂರ್ತಿ, ವೈಚಾರಿಕ ಲೇಖನಗಳ ಬಗ್ಗೆ ಡಾ. ಸುಧಾರಾಣಿ, ಮುಂಜಾವದ ಮಾತಿನ ಬಗ್ಗೆ ಮುದ್ದು ಮೂಡುಬೆಳ್ಳೆ, ಪ್ರಕಾಶಕರ ಪರವಾಗಿ ನಾಗೇಶ್ ಕಲ್ಲೂರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. 

ಶಶಿಲೇಖಾ ಬಿ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರೂಪಕಲಾ ಆಳ್ವ ನಿರೂಪಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article