
ಶೇಡಿಗುರಿ: ಶನೈಶ್ಚರ ಪೂಜೆ, ಚೈತನ್ಯ ಯುವಕ ಮಂಡಲ ಕಟ್ಟಡ ಉದ್ಘಾಟನೆ
Monday, March 24, 2025
ಮೂಡುಬಿದಿರೆ: ನಗರದ ಹೊರವಲಯದಲ್ಲಿ ಹೊಸಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಶೇಡಿಗುರಿಯಲ್ಲಿ ಚೈತನ್ಯ ಯುವಕ ಮಂಡಲದ 22ನೇ ವಾರ್ಷಿಕೋತ್ಸವದಂಗವಾಗಿ 22ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಮಾ.22 ರಂದು ವೇ.ಮೂ. ಮಾರೂರು ಖಂಡಿಗ ರಾಮದಾಸ ಆಸ್ರಣ್ಣ ಅವರ ಪೌರೋಹಿತ್ಯದಲ್ಲಿ ಜರಗಿತು.
ಇದೇ ಸಂದರ್ಭದಲ್ಲಿ ಚೈತನ್ಯ ಯುವಕ ಮಂಡಲದ ನೂತನ ಕಾರ್ಯಾಲಯ ಕಟ್ಟಡವನ್ನು ಉದ್ಯಮಿ ಶ್ರೀಪತಿ ಭಟ್ ಅವರು ಉದ್ಘಾಟಿಸಿದರು. ಹೊಸಬೆಟ್ಟು ಏರಿಮಾರು ಬರ್ಕೆ ಚಂದ್ರಹಾಸ ಸಾಧು ಸನಿಲ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುದರ್ಶನ ಎಂ., ಉದ್ಯಮಿ ದಿವಾಕರ ಶೆಟ್ಟಿ ತೋಡಾರು, ಚೈತನ್ಯ ಯುವಕ ಮಂಡಲದ ಅಧ್ಯಕ್ಷ ಪ್ರಣೀತ್ ಕುಕ್ಯಾನ್, ಬಾಳಿಕೆಬೆಟ್ಟುಗುತ್ತು ಸ್ವಯಂಪ್ರಭಾ ಜೈನ್, ಪುರೋಹಿತ ಕಿಶೋರ್ ಮೊಗೆರಾಯ, ಭಾಸ್ಕರ ಆಚಾರ್ಯ ಹೊಸಬೆಟ್ಟು ಸಹಿತ ಯುವಕಮಂಡಲದ ಪದಾಧಿಕಾರಿಗಳಿದ್ದರು.
ರಂಗ ತರಂಗ ಕಾಪು ತಂಡದ ಕಲಾವಿದರು ‘ಒರಿಯೆ’ ತುಳು ನಾಟಕ ಪ್ರದರ್ಶನವಿತ್ತರು.