ಮಂಗಳೂರು ವಿವಿ: ತೃತೀಯ ಲಿಂಗಿಗೆ ಸ್ನಾತಕೋತ್ತರ ಪದವಿ

ಮಂಗಳೂರು ವಿವಿ: ತೃತೀಯ ಲಿಂಗಿಗೆ ಸ್ನಾತಕೋತ್ತರ ಪದವಿ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇದೇ ಮೊದಲ ಬಾರಿಗೆ ತೃತೀಯ ಲಿಂಗಿಯೂ ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾಗಿ ಪದವಿ ಸ್ವೀಕರಿಸಲಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ತಿಳಿಸಿದರು.

ಸ್ನಾತಕೋತ್ತರ ಪದವಿ ಪರೀಕ್ಷೆಗೆ ಒಟ್ಟು 3331 ವಿದ್ಯಾರ್ಥಿಗಳು ಹಾಜರಾಗಿದ್ದು 3152(ಶೇ. 94.63) ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಸ್ನಾತಕ ಪದವಿ ಪರೀಕ್ಷೆಗೆ ಒಟ್ಟು 22056 ವಿದಾರ್ಥಿಗಳು ಹಾಜರಾಗಿದ್ದು 1551 (ಶೇ. 70.60)ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾದ 3152 ವಿದಾರ್ಥಿಗಳಲ್ಲಿ 906 ಹುಡುಗರು ಮತ್ತು 2245 ಹುಡುಗಿಯರು ಹಾಗೂ ಓರ್ವರು ತೃತೀಯ ಲಿಂಗಿ ಆಗಿರುತ್ತಾರೆ. ಸ್ನಾತಕ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ 15,571 ವಿದ್ಯಾರ್ಥಿಗಳಲ್ಲಿ 5990 ಹುಡುಗರು ಮತ್ತು 9581 ಹುಡುಗಿಯರಾಗಿದ್ದಾರೆ ಅವರು ಹೇಳಿದರು.

ಮೂವರು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಪಿಎಚ್‌ಡಿ..

ಪ್ರಸಕ್ತ ಸಾಲಿನ ಘಟಿಕೋತ್ಸವದಲ್ಲಿ ಮೂರು ಮಂದಿ ವಿದೇಶಿ ವಿದ್ಯಾರ್ಥಿಗಳು (ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆ) ಪಿಎಚ್‌ಡಿ ಪದವಿ ಸ್ವೀಕರಿಸಲಿದ್ದಾರೆ. ಕಳೆದ ವರ್ಷ 11 ಮಂದಿ ವಿದೇಶಿ ವಿದ್ಯಾರ್ಥಿಗಳು ಪಿಎಚ್‌ಡಿ ಪಡೆದಿದ್ದರು. ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಸ್ನಾತಕೋತ್ತರ ಹಾಗೂ ಸ್ನಾತಕ ಸೇರಿ 84 ಮಂದಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅವರಲ್ಲಿ ಒಬ್ಬರು ಬಾಂಗ್ಲಾದೇಶದ ಪ್ರಜೆಯೂ ಸೇರಿದ್ದಾರೆ.

ಕುಲ ಸಚಿವರಾದ  ರಾಜು ಮೊಗವೀರ(ಆಡಳಿತ), ಪ್ರೊ. ದೇವೇಂದ್ರಪ್ಪ (ಪರೀಕ್ಷಾಂಗ), ಹಣಕಾಸು ಅಧಿಕಾರಿ ಸಂಗಪ್ಪ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article