
ಬಜಾಲ್ ವಾರ್ಡಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಮನಪಾ ಆಯುಕ್ತರಿಗೆ ಮನವಿ
Thursday, March 20, 2025
ಮಂಗಳೂರು: ಬಜಾಲ್ ವಾರ್ಡಿನ ಕಟ್ಟಪುನಿ ಪ್ರದೇಶದಲ್ಲಿ ಕುಡಿಯುವ ನೀರು ಸಹಿತ ತ್ಯಾಜ್ಯ ವಿಲೇವಾರಿ, ಅಂಗನವಾಡಿ ರಸ್ತೆ ಅವ್ಯವಸ್ಥೆಗಳ ಸರಿಪಡಿಸಲು ಒತ್ತಾಯಿಸಿ 53ನೇ ಬಜಾಲ್ ವಾರ್ಡ್ ಅಭಿವೃದ್ಧಿ ಸಮಿತಿಯಿಂದ ಮಾ.20 ರಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು.
ನಿಯೋಗದಲ್ಲಿ 53ನೇ ಬಜಾಲ್ ವಾರ್ಡ್ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ, ಡಿವೈಎಫ್‌ಐ ಮುಖಂಡ ಸಂತೋಷ್ ಬಜಾಲ್, ಕಟ್ಟಪುನಿ ಪ್ರದೇಶದ ನಿವಾಸಿಗಳಾದ ಪ್ರಮೀಳಾ ಡಿ’ಸೋಜ, ಸತೀಶ್ ಕಟ್ಟಪುನಿ, ಪುರಂದರ, ನವೀನ್ ಕಾನೆಕರಿಯ, ಪ್ರಮೀಳಾ, ಜಯಪ್ರಕಾಶ್ ಜಲ್ಲಿಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.