
ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ: ಡಾ. ಎಂ. ಮೋಹನ್ ಆಳ್ವ
Thursday, March 20, 2025
ಮೂಡುಬಿದಿರೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎಂದರೆ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಒಂದು ಮಹತ್ವದ ಘಟ್ಟ. ಇದು ವಿದ್ಯಾರ್ಥಿಗಳ ಭವಿಷ್ಯದ ಧಿಕ್ಕನ್ನು ನಿರ್ಧರಿಸುವ ಪ್ರಮುಖ ಹಂತವಾಗಿದ್ದು, ಇದನ್ನು ಯಶಸ್ವಿಯಾಗಿ ನಿರ್ವಹಿಸಬೇಕಿದೆ.
‘ಪರೀಕ್ಷೆಗಳು ನಿಮ್ಮ ಪ್ರತಿಭೆಯನ್ನು ಮೌಲ್ಯಮಾಪನ ಮಾಡುವ ಒಂದು ಹಂತ ಮಾತ್ರ. ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ, ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ, ಪರಿಶ್ರಮ ಮತ್ತು ತಾಳ್ಮೆಯ ಮೂಲಕ ನಿಮ್ಮ ಗುರಿಗಳನ್ನು ಸಾಧಿಸಿ. ದಿನಚರಿಯನ್ನು ಸರಿಯಾಗಿ ಅನುಸರಿಸಿ, ಸಮರ್ಪಕವಾದ ಅಧ್ಯಯನ ಮಾಡಿ, ಆರೋಗ್ಯದ ಕಡೆಗೂ ಗಮನ ಹರಿಸಿ. ನೀವು ಶ್ರದ್ಧೆಯಿಂದ, ಧೈರ್ಯದಿಂದ ಮತ್ತು ಸತತ ಪ್ರಯತ್ನದೊಂದಿಗೆ ಈ ಹಂತವನ್ನು ದಾಟಿ ಯಶಸ್ವಿ ಭವಿಷ್ಯವನ್ನು ರೂಪಿಸಬಹುದು.
ವಿದ್ಯಾರ್ಥಿಗಳಾದ ನೀವು ಚಿಂತೆಯಿಲ್ಲದೆ, ಆತ್ಮಸ್ಥೆರ್ಯದಿಂದ, ಶ್ರದ್ಧೆಯಿಂದ ಮುಂದುವರಿಯಬೇಕು. ನಿಮ್ಮ ಕನಸುಗಳನ್ನು, ನಿಮ್ಮ ಗುರಿಗಳನ್ನು ಸಾಧಿಸಲು ಈ ಹಂತವು ಒಂದು ಸುವರ್ಣಾವಕಾಶ. ನಿಮ್ಮ ಭವಿಷ್ಯ ಉಜ್ವಲವಾಗಲಿ, ಗುರಿಗಳನ್ನು ಸಾಧಿಸಿ, ನಿಮ್ಮ ಶ್ರಮಕ್ಕೆ ಶ್ರೇಷ್ಠ ಫಲ ದೊರಕಲಿ ಎಂಬ ಹಾರ್ದಿಕ ಹಾರೈಕೆಗಳು ಎಂದು ಸಮಗ್ರ ಶಿಕ್ಷಣದ ತಜ್ಞ, ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.