
ಐದನೇ ಮಹಡಿಯಿಂದ ಬಿದ್ದು ಬಾಲಕ ಸಾವು
ಮಂಗಳೂರು: ವಸತಿ ಸಮುಚ್ಚಯವೊಂದರ ಐದನೇ ಮಹಡಿಯಿಂದ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ನಗರದ ಮೇರಿಹಿಲ್‌ನಲ್ಲಿ ಶನಿವಾರ ನಡೆದಿದೆ.
ಇರಾ ಕಿನ್ನಿಮಜಲು ಬೀಡು ಸುದೇಶ್ ಭಂಡಾರಿ ಅವರ ಪುತ್ರ ಸಮರ್ಜಿತ್ (13) ಮೃತಪಟ್ಟ ಬಾಲಕ. ಈತ ಮೇರಿಹಿಲ್‌ನ ಖಾಸಗಿ ಶಾಲೆಯೊಂದರಲ್ಲಿ 6ನೇ ತರಗತಿ ಕಲಿಯುತ್ತಿದ್ದ.
ಶನಿವಾರ ಮುಂಜಾನೆ ಯಾವುದೋ ಕಾರಣಕ್ಕೆ ಸ್ನೇಹಿತರೊಂದಿಗೆ ವಸತಿ ಸಮುಚ್ಚಯದ ಮಹಡಿಗೆ ತೆರಳಿದ್ದು, ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ.
ಬೆಳಗ್ಗೆ 5.30ರಿಂದ 6 ಗಂಟೆ ನಡುವೆ ಮಾತಾ ರೆಸಿಡೆನ್ಸಿಯಲ್ಲಿ ಘಟನೆ ನಡೆದಿದ್ದು, ಕೂಡಲೇ ಮನೆಯವರು ಬಾಲಕನನ್ನು ಎಜೆ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ತಲೆ ಮತ್ತು ಬೆನ್ನು ಮೂಳೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅಷ್ಟರಲ್ಲಿಯೇ ಮೃತಪಟ್ಟಿದ್ದಾನೆ. ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರು. ವಸತಿ ಸಮುಚ್ಛಯ ಇತರ ಕುಟುಂಬ ಸದಸ್ಯರು ಸೇರಿದ್ದು ಎಲ್ಲರೂ ಶಾಕ್ ಗೆ ಒಳಗಾಗಿದ್ದರು. ಮನೆಯವರು ತೀವ್ರ ಆಘಾತಕ್ಕೆ ಒಳಗಾಗಿದ್ದರು. ಕಾವೂರು ಠಾಣೆಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ.