ಖಂಡಿಗೆ ನದಿ ಉಳಿಸಿ ಹೋರಾಟ: ಬೃಹತ್ ಪ್ರತಿಭಟನೆ

ಖಂಡಿಗೆ ನದಿ ಉಳಿಸಿ ಹೋರಾಟ: ಬೃಹತ್ ಪ್ರತಿಭಟನೆ


ಮಂಗಳೂರು: ಇತಿಹಾಸ ಪ್ರಸಿದ್ದ ಚೇಳೈರು ಖಂಡಿಗೆ ನಂದಿನಿ ನದಿಗೆ ಮುಂಚೂರು ವೆಟ್‌ವೆಲ್‌ನ ಹತ್ತಿರದ ಒಳಚರಂಡಿಯ ಕೊಳಚೆ ನೀರು ಕೊಡಿಪಾಡಿಯಲ್ಲಿ ನಿರ್ಮಾಣವಾಗಿರುವ ತ್ಯಾಜ್ಯ ಸಂಸ್ಕರಣಾ ಘಟಕದ ನೀರು, ಚೊಕ್ಕಬೆಟ್ಟು ಪರಿಸರದ ಮನೆಯ ತ್ಯಾಜ್ಯ ನೀರು, ಮುಕ್ಕದ ಖಾಸಗಿ ಅಸ್ಪತ್ರೆ, ಕಾಲೇಜು, ವಸತಿ ಗೃಹ ಮತ್ತು ಹೊಟೇಲ್‌ಗಳ ತ್ಯಾಜ್ಯ ನೀರುಗಳನ್ನು ನಂದಿನಿ ನದಿಗೆ ಬೀಡುವುದರಿಂದ ನಂದಿನಿ ನದಿ ಸಂಪೂರ್ಣ ಕಲುಷಿತಗೊಂಡಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.

ಇದರಿಂದಾಗಿ ಚೇಳೈರು ಖಂಡಿಗೆ ಭಾಗದ ಅನೇಕ ಕೃಷಿಯನ್ನೆ ಅವಲಂಬಿತ ಕುಟುಂಬಗಳು ಕೃಷಿ ಮಾಡದ ಪರಿಸ್ಥಿತಿ ಎದುರಾಗಿದ್ದು, ಕುಡಿಯುವ ನೀರಿಗೂ ಸಮಸ್ಯೆಯಾಗಿದ್ದು ಬಾವಿಗಳು ಮಲೀನಗೊಂಡಿದೆ ಮಾತ್ರವಲ್ಲದೆ ಇತಿಹಾಸ ಪ್ರಸಿದ್ಧ ಖಂಡಿಗೆ ದೈವಸ್ಥಾನದ ಮೀನು ಹಿಡಿಯುವ ವಿಶೇಷ ಜಾತ್ರೆ ನಿಲ್ಲುವ ಹಂತಕ್ಕೆ ತಲುಪಿದೆ ಜಾನುವಾರುಗಳಿಗೆ ನೀರು ಕುಡಿಯಲು ಮತ್ತು ಮೇವು ತಿನ್ನದ ಹೀನಾಯ ಪರಿಸ್ಥಿತಿ ಎದುರಾಗಿದ್ದು, ಬಾವಿಯ ನೀರು ಕುಡಿದ ಅನೇಕ ಜನರು ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿದ್ದು, ಖೇದಕರ ವಿಷಯವಾಗಿದೆ. 


ಈ ಬಗ್ಗೆ ನಂದಿನಿ ನದಿ ಸಂರಕ್ಷಣಾ ಸಮಿತಿ ಖಂಡಿಗೆ ಚೇಳೈರು ಮೂಲಕ ಜಿಲ್ಲೆಯ ಸಂಸದರು, ಕ್ಷೇತ್ರದ ಶಾಸಕರಿಗೆ, ಮಂಗಳೂರು ಮಹಾನಗರ ಪಾಲಿಕೆ ಮೇಯರ್‌ಗೆ, ಜಿಲ್ಲಾಧಿಕಾರಿಗೆ, ನಗರ ಪಾಲಿಕೆ ಅಧಿಕಾರಿಗಳಿಗೆ, ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ಮನವಿಯನ್ನು ನೀಡಲಾಗಿತ್ತು. ಮನವಿಗೆ ಸ್ಪಂದಿಸದ ಕಾರಣ ಇಂದು ಎಲ್ಲಾ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಗ್ರಾಮಸ್ಥರು ಸೇರಿ ಜಿಲ್ಲಾಡಳಿತ ಮತ್ತು ಪರಿಸರ ಇಲಾಖೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು. 

ಪ್ರತಿಭಟನೆಯಲ್ಲಿ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ, ಯಾವುದೇ ಪಕ್ಷ,ಯಾವುದೇ ಜಾತಿಯನ್ನು ನೋಡದೇ ಕೇವಲ ನಮ್ಮ ನಂದಿನಿ ನದಿಯನ್ನು ಕಲುಷಿತದಿಂದ ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸುವ ಯಾವುದೇ ಅಸ್ಪತ್ರೆ, ಖಾಸಗಿ ಅಪಾರ್ಟಮೆಂಟ್, ಎಸ್.ಟಿ.ಪಿ., ವೆಟ್‌ವೆಲ್‌ನ ನೀರು ನಮ್ಮ ನದಿಗೆ ಬರಬಾರದು ಅದರ ಬದಲಾಗಿ ಕಲುಷಿತ ನೀರನ್ನು ಸಂಸ್ಕರಿಸಿ ಎಂ.ಅರ್.ಪಿ.ಎಲ್ ಸಂಸ್ಥೆಯು ಆ ನೀರನ್ನು ಉಪಯೋಗಿಸುವಂತೆ ಸಂಸದರು ಈ ಬಗ್ಗೆ ಎಂ.ಅರ್.ಪಿ.ಎಲ್. ಸಂಸ್ಥೆಯ ಜೊತೆ ಮಾತನಾಡಿ ಇದಕ್ಕೆ ಪೂರಕ ವ್ಯವಸ್ಥೆ ಅಗುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ನಿಮ್ಮ ಹೋರಾಟಕ್ಕೆ ಸದಾ ನನ್ನ ಬೆಂಬಲವಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ, ನಂದಿನಿ ನದಿ ಉಳಿಸಿ ಎಂಬ ಹೋರಾಟ ಕೇವಲ ಇಂದು ಮಾತ್ರ ನಡೆಯದೇ ನಮ್ಮ ಸಮಸ್ಯೆ ಪರಿಹಾರ ಅಗುವವರೆಗೆ ಹೋರಾಟ ಮುಂದುವರಿಯಬೇಕು ಯಾರದೋ ಒತ್ತಡಕ್ಕೆ, ಹಣದ ಅಸೆಗೆ ಬಲಿಯಾಗಬಾರದು ಇದರ ಹಿಂದೆ ಎಷ್ಟೆ ಬಲಿಷ್ಟ ರಾಜಕೀಯ ಪ್ರೇರಿತ ವ್ಯಕ್ತಿ ಇದ್ದರು ಅತನ ವಿರುದ್ಧ ನಾವು ಹೋರಾಡಬೇಕು ಎಂದರು. 

ಚೇಳೈರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ ಮಾತನಾಡಿ, ನಂದಿನಿ ನದಿ ಕಲುಷಿತಗೊಂಡ ಬಗ್ಗೆ ಮೊನ್ನೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನಲ್ಲಿ ಸಂಸದರಾದ ಬ್ರಿಜೇಶ್ ಚೌಟ ನೇತೃತ್ವದಲ್ಲಿ ನಡೆದ ದಿಶಾ ಸಭೆಯಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್ ನಂದಿನಿ ನದಿ ಅಲ್ಲಿನ ಗ್ರಾಮಸ್ಥರ ಜೀವನದಿ ಇತಿಹಾಸ ಪ್ರಸಿದ್ಧ ದೈವಸ್ಥಾನಕ್ಕೆ ಸಂಬಂಧಿಸಿದ ನದಿ ಕಲುಷಿತಗೊಂಡಿರುವ ಬಗ್ಗೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು ತಕ್ಷಣ ಅದನ್ನು ಸರಿಪಡಿಸಬೇಕು ಎಂದು ಸಂಸದರಲ್ಲಿ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಸಂಸದರು ಹಾಗೂ ಜಿಲ್ಲಾಧಿಕಾರಿಗಳು ಮನಪಾ ಅಯುಕ್ತರು, ಪರಿಸರ ಇಲಾಖೆ ಮತ್ತು ಸಂಬಂಧಿಸಿದ ಅಧಿಕಾರಿಗಳು ಆ ಸ್ಥಳಕ್ಕೆ ಭೇಟಿ ನೀಡಲು ಸೂಚಿಸಿದ್ದರು ಸೂಚನೆ ಮೇರೆಗೆ ಚೇಳೈರು ನಂದಿನಿ ನದಿ ಬಳಿ ಮಂಗಳೂರು ಮಹಾನಗರ ಪಾಲಿಕೆಯ ಅಯುಕ್ತ ರವಿಚಂದ್ರನಾಯಕ್ ಭೇಟಿ ನೀಡಿದ್ದಾರೆ.

ಖಾಸಗಿ ಅಸ್ಪತ್ರೆ, ಕೊಡಿಪಾಡಿ ಎಸ್‌ಟಿಪಿ ಪ್ಲಾಂಟ್, ಮುಂಚೂರು ಎಸ್‌ಟಿಪಿ ಪ್ಲಾಂಟ್ ಖಾಸಗಿ ಪ್ಲಾಟ್‌ಗಳ ಕಲುಷಿತ ನೀರು ಬರುವುದನ್ನು ಪರಿಶೀಲಿಸಿ ಅದರ ನೀರನ್ನು ಟೆಸ್ಟ್‌ಗೆ ಕಳುಹಿಸಿ ರಿಪೋರ್ಟ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಎಂದರು.

ಡಾ. ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ, ನಾವು ಫಲವತ್ತಾದ ಕೃಷಿ ಭೂಮಿಯನ್ನು ಜುಜುಬಿ ಹಣಕ್ಕೆ ದೊಡ್ಡ ದೊಡ್ಡ ಸಂಸ್ಥೆಗಳಿಗೆ ನೀಡಿ, ನಾವು ಈಗ ಕಷ್ಟ ನಷ್ಟ ಅನುಭವಿಸುತ್ತಾ ಇದ್ದೇವೆ ದೊಡ್ಡ ದೊಡ್ಡ ಕಂಪೆನಿಗಳು, ಅಸ್ಪತ್ರೆಗಳು ನಮ್ಮ ಊರಿಗೆ ಬಂದು ಅದರ ಕಲುಷಿತ ನೀರು ನಮ್ಮ ನದಿಗೆ ಬಿಡುವುದರಿಂದ ಪರಿಸರ ಜೊತೆಗೆ ನಮ್ಮ ಅರೋಗ್ಯಕ್ಕೆ ಹಾನಿಕರ ಈ ಬಗ್ಗೆ ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ದೊಡ್ಡ ಅಪಾಯ ಕಾದಿದೆ ಹಾಗಾಗಿ ನಿರಂತರ  ಹೋರಾಟದ ಅಗತ್ಯವಿದೆ ಎಂದು ಹೇಳಿದರು.

ನಂದಿನಿ ನದಿ ಹೋರಾಟ ಸಮಿತಿಯ ಪ್ರಮುಖರಾದ ದಿವಾಕರ ಸಾಮಾನಿ ಮಾತನಾಡಿ, ಇಂದಿನಿಂದ 15 ದಿನದ ಒಳಗೆ ನಮ್ಮ ನಂದಿನಿ ನದಿಗೆ ಬರುವ ಖಾಸಗಿ ಅಸ್ಪತ್ರೆ, ಎಸ್‌ಟಿಪಿ ಪ್ಲಾಂಟ್, ವೆಟ್‌ವೆಲ್ ನೀರು, ಖಾಸಗಿ ವಸತಿ ಸಮುಚ್ಚಯದ ನೀರನ್ನು ಜಿಲ್ಲಾಡಳಿತ ಬಂದ್ ಮಾಡಬೇಕು ನಂತರ ನದಿಯಲ್ಲಿ ಬೆಳೆದಿರುವ ಕಲುಷಿತ ಗಿಡಗಳನ್ನು ತೆಗೆದು ನದಿಯನ್ನು ಸ್ವಚ್ಚಗೊಳಿಸಬೇಕು ಇದಕ್ಕೆ ಜಿಲ್ಲಾಡಳಿತ ಸರಿಯಾದ ಕ್ರಮ ಕೈಗೊಳ್ಳದಿದ್ದರೆ ಅಗುವ ಅನಾಹುತಗಳಿಗೆ ಜಿಲ್ಲಾಡಳಿತ ನೇರ ಹೊಣೆ ಮಾತ್ರವಲ್ಲದೇ ಮುಂದಿನ ದಿನ ಉಗ್ರವಾದ ಹೋರಾಟದ ಎಚ್ಚರಿಕೆ ನೀಡಿದರು.

ಚೇಳೈರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರೇಖಾ, ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಯಶೋದ, ಲತಾ, ವಸಂತಿ, ಪ್ರೇಮ ಶೆಟ್ಟಿ, ಸುಕುಮಾರಿ, ಚರಣ್ ಕುಮಾರ್, ಪ್ರತಿಮಾ ಶೆಟ್ಟಿ ಮಾಜಿ ಮನಪಾ ಸದಸ್ಯೆ ಶ್ವೇತಾ ಪೂಜಾರಿ, ಪಡಪಣಂಬೂರು ಗ್ರಾಮ ಪಂಚಾಯತ್ ಸದಸ್ಯರಾದ ವಿನೋದ್ ಬೆಳ್ಳಾಯಿರು, ಮೂಲ್ಕಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮೋಹನ್ ಕೋಟ್ಯಾನ್ ಪ್ರಮುಖರಾದ, ಸುಕೇಶ್ ಶೆಟ್ಟಿ ಖಂಡಿಗೆ, ರಮೇಶ್ ಪೂಜಾರಿ ಚೇಳೈರು, ಕಿರಣ್ ಶೆಟ್ಟಿ ಕೆರೆಮನೆ, ವಾಸುದೇವಾ ಶೆಟ್ಟಿ, ದಿವಾಕರ ಶೆಟ್ಟಿ, ವೆಂಕಟೇಶ ಶೆಟ್ಟಿ, ಮನೋಜ್ ಶೆಟ್ಟಿ ಚೇಳೈರು, ನಿತಿನ್ ಶೆಟ್ಟಿ ಖಂಡಿಗೆ, ಗಂಗಾಧರ ಪೂಜಾರಿ, ಚರಣ್ ಕುಮಾರ್, ಉದಯಕುಮಾರ್ ಶೆಟ್ಟಿ ಚೇಳೈರು, ಮಂಗಳೂರು ನಾಗರಿಕ ಸಲಹಾ ಸಮಿತಿ ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಸುರತ್ಕಲ್ ಬಂಟರ ಸಂಘದ ನಿಕಟಪೂರ್ವಧ್ಯಕ್ಷ ಸುಧಾಕರ ಪೂಂಜ,ವೀಣಾ ಶೆಟ್ಟಿ ಚೇಳೈರುಗುತ್ತು, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ವಜ್ರಾಕ್ಷಿ ಪಿ ಶೆಟ್ಟಿ, ವಿದ್ವಾನ್ ಚಂದ್ರಶೇಖರ ನಾವಡ, ಹಳೆಯಂಗಡಿ ರಂಗಭಟ್, ಮೊಗವೀರ ಮಿತ್ರಪಟ್ನ ಸುರೇಶ್ ಕರ್ಕೆರ, ಕೆಥೋಲಿಕ್‌ನ ಪೌಲ್ ಡಿಸೋಜ, ಸತೀಶ್ ಮುಂಚೂರು, ಜಯರಾಮ ಅಮೀನ್, ಸುಭಾಷಿತ ನಗರ ಅಸೋಸಿಯೇಷನ್ ಅಧ್ಯಕ್ಷ ರಮೇಶ್ ಶೆಟ್ಟಿ ಉಪಸ್ಥಿತರಿದ್ದರು.

ಮೂಲ್ಕಿ ತಹಶಿಲ್ದಾರ್ ಪ್ರದೀಪ್ ಕುರ್ಡೆಕರ್ ಹಾಗೂ ಚೇಳೈರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿತ್ಯಾನಂದ ಅವರು ಪ್ರತಭಟನಾಕಾರರಿಂದ ಮನವಿ ಸ್ವೀಕರಿಸಿದರು. ಗ್ರಾಮ ಅಡಳಿತ ಅಧಿಕಾರಿ ಸುಲೋಚನ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article