
ಡಿಕೆಶಿ ನಟ್, ಬೋಲ್ಟ್ ಹೇಳಿಕೆಗೆ ಕಂಗನಾ ತಿರುಗೇಟು
ಮಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಟ್, ಬೋಲ್ಟ್ ಹೇಳಿಕೆಗೆ ಬಾಲಿವುಡ್ ನಟಿ, ಸಂಸದೆ ಮಂಗಳೂರಿನಲ್ಲಿ ತಿರುಗೇಟು ನೀಡಿದ್ದಾರೆ.
ಡಿಕೆಶಿ ಹೆಸರು ಪ್ರಸ್ತಾಪಿಸದೆ ಮಾತನಾಡಿದ ಕಂಗನಾ, ವೀರಾಧಿವೀರರೇ ಕಲಾಕಾರಾಗಿರುವ ಬಗ್ಗೆ ಶಾಸ್ತ್ರಗಳಲ್ಲಿ ಉಲ್ಲೇಖವಿದೆ, ಇಂದ್ರ, ಅರ್ಜುನರು ಕಲಾವಿಧರಾಗಿದ್ದರು. ಕಲಾವಿದರೊಂದಿಗೆ ತಾಯಿ ಸರಸ್ವತಿ ಇರುತ್ತಾಳೆ. ಕಲಾವಿರೊಂದಿಗೆ ದುರ್ವರ್ತನೆ ಸರಿಯಲ್ಲ. ಕಲಾವಿದರ ನಟ್ಟು ಬೋಲ್ಟ್ ಟೈಟ್ ಮಾಡಲು ಹೋಗಿ ಬೇರೆಯದ್ದೇ ಆಗಬಹುದು ತುಳಿತಕ್ಕೊಳಗಾದವರ ರಕ್ಷಣೆಗೆ ವಿಷ್ಣು ಜನ್ಮ ತಾಳಿದ್ದು ಇದೆ ಕಲಾವಿದರ ರಕ್ಷಣೆಗೆ ದೇವರು ಬಂದೇ ಬರುತ್ತಾರೆ ಎಂದರು.
ಕುಂಭಮೇಳ, ಸನಾತನ ದರ್ಮದ ಬಗ್ಗೆ ಟೀಕೆಗಳು ಮುಂದುವರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇವರ ಆರತಿ ಬೆಳಗುವಾಗ ದುಷ್ಟ ಶಕ್ತಿಗಳು ಉರಿದು ಹೋಗುತ್ತವೆ ದೇವಿಯ ಅವತಾರಗಳು ಈ ದುಷ್ಟ ಶಕ್ತಿಗಳ ಸಂಹಾರಕ್ಕೆ ಇದೆ. ಎಲ್ಲರ ಮೇಲೂ ಈಶ್ವರನ ಆಶೀರ್ವಾದವಿರಲಿ. ಟೀಕೆ ಮಾಡುವವರಿಗೆ, ಅವಹೇಳನ ಮಾಡಿದವರಿಗೆ ದೇವರು ಸದ್ಭುದ್ಧಿ ನೀಡಲಿ ಎಂದರು.
ಔರಂಗಜೇಬ್ ವೈಭವೀಕರಣ..
ಗುಲಾಮರ ದಿನಗಳು ಮುಗಿದು ಹೋಗಿವೆ. ಈಗ ಏನಿದ್ದರೂ ಶಿವಾಜಿ ಮಾಹಾರಾಜರ ಸಂಭಾಜಿ ಮಹಾರಾಜರ ಯಶೋಗಾಥೆ ಮೊಳಗಲಿದೆ ಅವರ ಹೆಸರಿನ ರಸ್ತೆಗಳು ಚಿಹ್ನೆಗಳು ಬೇಕು ಹಿಂದೂ ಧರ್ಮದ ರಕ್ಷಣೆಗೆ ಸ್ವರಾಜ್ಯಕ್ಕೆ ಪ್ರಾಣ ತ್ಯಾಗ ಮಾಡಿದವರಬಗ್ಗೆ ತಿಳಿದು ಬರಬೇಕು ಗುಲಾಮರ ದಿನ ಇದಲ್ಲ ಎಂದರು.