
ಕಟೀಲು ತಾಯಿಯ ದರ್ಶನ ಪಡೆದ ಕಂಗನಾ ರಾಣಾವತ್: ಸನಾತನ ಧರ್ಮದ ಜಾಗೃತಿಯಾಗಿದೆ
ಮಂಗಳೂರು: ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಬಾಲಿವುಡ್ ನಟಿ ಬಿಜೆಪಿ ಸಂಸದೆ ಕಂಗನಾ ರಾಣಾವತ್ ಇಂದು ಬೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದದರ್ಭ ದೇವಳದ ವತಿಯಿಂದ ಕಂಗಾನಾ ಅವರನ್ನು ಗೌರವಿಸಲಾಯಿತು. ದೇವರ ಶೇಷ ವಸ್ತ್ರ, ಪ್ರಸಾದ ನೀಡಲಾಯಿತು. ನಂತರ ದೇವರ ಅನ್ನ ಪ್ರಸಾದ ಸ್ವೀಕರಿಸಿದರು. ಸಂಸದ ಬ್ರಿಜೇಶ್‌ಚೌಟ, ಮಿಥುನ್ ರೈ, ಅನಂತ ಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಕಿಶೋರ್ ಶೆಟ್ಟಿ ಕೊಡೆತ್ತೂರುಗುತ್ತು, ಪ್ರವೀಣ್ ಭಂಡಾರಿ, ಬಿಪಿನ್ ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು, ಭುವನಾಭಿರಾಮ ಉಡುಪ, ಲೋಕೇಶ್ ಶೆಟ್ಟಿ ಬರ್ಕೆ, ಶೈಲೇಶ್ ಅಂಚನ್, ಪ್ರೇಮ್ ರಾಜ್ ಶೆಟ್ಟಿ, ಮೋಹನ್ ದಾಸ್ ಭಂಡಾರಿ, ಸತೀಶ್ ಶೆಟ್ಟಿ ಮೊದಲಾದವರಿದ್ದರು.
ದೇವಿಯ ದರ್ಶನಕ್ಕೆ ಬಂದಿದ್ದೇನೆ..
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಂಗನ ರಣಾವತ್, ದೇವಿಯ ದರ್ಶನಕ್ಕೆ ಬಂದಿದ್ದೇನೆ ನಿನ್ನೆ ಕಾಪು ಮಾರಿ ಗುಡಿ , ಇಂದು ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದೇನೆ.
ತಾಯಿಯ ದರ್ಶನ ಪಡೆದಿದ್ದೇನೆ ಬಹಳ ವರ್ಷಗಳಿಂದ ಈ ಭಾಗಕ್ಕೆ ಬರಬೇಕೆಂಬ ಅಭಿಲಾಷೆ ಇತ್ತು ತಾಯಿ ತನ್ನ ಆಶೀರ್ವಾದ ನೀಡಲು ಕರೆಸಿಕೊಂಡಿದ್ದಾಳೆ ಎಂದರು.
ಸನಾತನ ಧರ್ಮ ಸನಾತನ ಸಂಸ್ಕೃತಿಯ ಬಗ್ಗೆ ಜಾಗೃತಿಯಾಗಿದೆ ದೇಶ ಉನ್ನತ ಪ್ರಗತಿಯತ್ತ ಸಾಗುತ್ತಿದೆ ನಮ್ಮ ಸನಾತನ ಧರ್ಮದ ಬಗ್ಗೆ ಜನರು ಜಾಗೃತರಾಗಿದ್ದಾರೆ ನಮ್ಮ ದೇವಾಲಯಗಳು ಕೇವಲ ದೇವರ ಆಲಯವಾಗಿ ಉಳಿದಿಲ್ಲ ನಮ್ಮ ದೇವಾಲಯಗಳು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ ದೇವಾಲಯಗಳು ಆಸ್ಪತ್ರೆಗಳನ್ನ ಶಾಲೆಗಳನ್ನು ನಡೆಸುತ್ತಿವೆ ದೇವಾಲಯಗಳು ಆಶ್ರಮಗಳನ್ನು ನಡೆಸುತ್ತವೆ ದೇವಾಲಯಗಳು ನಮ್ಮ ಸಾಂಸ್ಕೃತಿಕ ದ್ಯೋತಕಗಳು ಎಂದರು.