
ರಂಜಾನ್ ಫುಡ್ ಸ್ಟ್ರೀಟ್ ಫೆಸ್ಟಿವಲ್
Tuesday, March 4, 2025
ಮಂಗಳೂರು: ಪವಿತ್ರ ರಂಜಾನ್ ಮಾಸದಲ್ಲಿ 9ನೇ ಬಾರಿಗೆ ಫುಡ್ ಸ್ಟ್ರೀಟ್ ಫೆಸ್ಟಿವಲ್ ಅನ್ನು ಫಿಜಾ ಬೈ ನೆಕ್ಸಸ್ ಆಯೋಜಿಸಿದೆ. ರಂಜಾನ್ ಸಂಪ್ರದಾಯಗಳಲ್ಲಿ ಆಹಾರವು ಅವಿಭಾಜ್ಯ ಪಾತ್ರ ವಹಿಸುತ್ತದೆ, ಏಕೆಂದರೆ ಈ ಸಮಯದಲ್ಲಿ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸವನ್ನು (ರೋಜಾ) ಆಚರಿಸಲಾಗುತ್ತದೆ.ಈ ನಿಟ್ಟಿನಲಿ ನೆಕ್ಸಸ್ ಮಾಲ್‌ನ ಫಿಜಾದಲ್ಲಿ ಒಂದು ತಿಂಗಳ ಕಾಲ ರುಚಿಕರವಾದ ಔತಣಕೂಟವನ್ನು ಆಯೋಜಿಸಿದೆ.
ವಿವಿಧ ಬಗೆಯ ಕಬಾಬ್ಗಳು, ಅದ್ಭುತ ರುಚಿಯ ಬಿರಿಯಾನಿ, ಫಲಾಫೆಲ್, ಹಲೀಮ್, ಶೀರ್ ಖುರ್ಮಾ ಸೇರಿದಂತೆ ಸಿಹಿತಿಂಡಿಗಳು ಮತ್ತು ಪಾನೀಯಗಳನ್ನು ಇಲ್ಲಿವೆ.ಉತ್ಸವದಲ್ಲಿ ಪ್ರತಿದಿನ ಸಂಜೆ 4 ರಿಂದ ರಾತ್ರಿ 10 ರವರೆಗೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.