
‘ದೃಗ್ಗೋಚರ ಬೆಳಕಿನ ಸಹಾಯದಿಂದ ಜೀವಕೋಶಗಳ ನಿಖರ ಅಧ್ಯಯನ ಸಾಧ್ಯ: ಡಾ ಎ.ವಿ. ರಾಧಾಕೃಷ್ಣನ್
Tuesday, March 11, 2025
ಮಂಗಳೂರು: ಜೀವಕೋಶಗಳ ಚಲನಶೀಲತೆ, ಅಸಹಜ ಕಾರ್ಯನಿರ್ವಹಣೆ, ಡಿಎನ್‌ಎ, ಆರ್‌ಎನ್‌ಎಗಳ ಸಂರಚನೆ ಇತ್ಯಾದಿಗಳನ್ನು ದೃಗ್ಗೋಚರ ಬೆಳಕಿನ ಸಹಾಯದಿಂದ ಅಧ್ಯಯನ ಮಾಡಬಹುದು ಎಂದು ಮುಂಬೈನ ಸೋಮೈಯಾ ವಿದ್ಯಾವಿಹಾರ್ ವಿಶ್ವವಿದ್ಯಾಲಯದ SciSER ಇಲ್ಲಿನ ಸಹ ಪ್ರಾಧ್ಯಾಪಕ ಡಾ ಎ.ವಿ. ರಾಧಾಕೃಷ್ಣನ್ ಹೇಳಿದರು.
ಅವರು ಮಂಗಳೂರಿನ ರಥಬೀದಿಯ ಡಾ. ದಯಾನಂದ ಪೈ-ಪಿ. ಸತೀಶ್ ಪೈ ಕಾಲೇಜಿನಲ್ಲಿ ನಡೆದ ಪ್ರೊ. ಪ್ರಕಾಶ್ ಪಿ. ಕಾರಟ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ತಮ್ಮ ಸಂಶೋಧನಾ ಫಲಿತಾಂಶಗಳನ್ನು ಹಂಚಿಕೊಂಡರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಅವರು ಅಧ್ಯಕ್ಷತೆ ವಹಿಸಿದ್ದರು. ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಇಲ್ಲಿನ ನಿವೃತ್ತ ಪ್ರೊಫೆಸರ್ ನಾರಾಯಣ ಭಟ್ ಅವರು ಉಪನ್ಯಾಸದ ಬಗ್ಗೆ ಸಂಕ್ಷಿಪ್ತ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಪ್ರೊ. ಪ್ರಕಾಶ್ ಪಿ. ಕಾರಟ್ ಉಪಸ್ಥಿತರಿದ್ದರು. ಸಂತ ಅಲೋಶಿಯಸ್ ಡೀಮ್ಢ್ ಟು ಬಿ ಯೂನಿವರ್ಸಿಟಿಯ ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ. ನೀಲಕಂಠನ್ ಅವರು ಸ್ವಾಗತಿಸಿದರು. ಡಾ. ರೀಟಾ ಕ್ರಾಸ್ತಾ ಅವರು ರಾಧಾಕೃಷ್ಣನ್ ಅವರನ್ನು ಪರಿಚಯಿಸಿದರು.
ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ರಮಾಕಾಂತ ಪುರಾಣಿಕ್ ಅವರು ವಂದಿಸಿದರು. ಡಾ. ಕೃಷ್ಣಪ್ರಭ ಎಂ. ನಿರೂಪಿಸಿದರು.