ಅಕ್ರಮ ಗೋಸಾಗಾಟಗಾರರ ಹೆಡೆಮುರಿ ಕಟ್ಟಿ: ಶಾಸಕ ಕಾಮತ್ ಆಗ್ರಹ

ಅಕ್ರಮ ಗೋಸಾಗಾಟಗಾರರ ಹೆಡೆಮುರಿ ಕಟ್ಟಿ: ಶಾಸಕ ಕಾಮತ್ ಆಗ್ರಹ


ಮಂಗಳೂರು: ಮಂಗಳೂರಿನಲ್ಲಿ ಅಕ್ರಮ ಗೋಮಾಂಸ ಸಾಗಾಟದ ಜಾಲವು ವಿಸ್ತಾರಗೊಂಡಿದ್ದು ಕಳೆದ ಒಂದು ವಾರದಲ್ಲಿ ಹಿಂದೂ ಸಂಘಟನೆಗಳ ಮಾಹಿತಿಯ ಮೇರೆಗೆ ಪೊಲೀಸರು ನಾಲ್ಕೈದು ಕಡೆ ವಾಹನಗಳನ್ನು ತಡೆದು ಒಂದು ಟನ್‌ಗೂ ಅಧಿಕ ಗೋಮಾಂಸವನ್ನು ಪತ್ತೆ ಹಚ್ಚಿದ್ದಾರೆ. ಪೊಲೀಸ್ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿ ಸಮಾಜದ ಸ್ವಾಸ್ಥ್ಯ ಕದಡುವವರ ಹೆಡೆಮುರಿ ಕಟ್ಟಬೇಕೆಂದು ಶಾಸಕ ವೇದವ್ಯಾಸ ಕಾಮತ್ ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಈ ಹಿಂದೆ ಕುದ್ರೋಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಸಾಯಿಖಾನೆಯು ರಾಜ್ಯ ಮಾಲಿನ್ಯ ಮಂಡಳಿಯ ಆದೇಶದಂತೆ ಸ್ಥಗಿತವಾಗಿ 4 ವರ್ಷಗಳೇ ಕಳೆದಿದೆ. ಆದರೂ ಸಹ ಕದ್ದ ಗೋವುಗಳ ವಾಹನಗಳು ಅಲ್ಲಿಗೇ ಯಾಕೆ ಹೋಗುತ್ತಿವೆ? ಯಾರ ಕುಮ್ಮಕ್ಕಿನಿಂದ ಅಲ್ಲಿ ರಾಜಾರೋಷವಾಗಿ ಗೋವಧೆ ನಡೆಯತ್ತಿದೆ? ಕಾನೂನು ಹಾಗೂ ಪೊಲೀಸ್ ಇಲಾಖೆ ಬಗ್ಗೆ ಭಯವೇ ಇಲ್ಲವಾದಾಗ ಮಾತ್ರ ಇಂತಹ ಅಕ್ರಮಗಳು ನಡೆಯಲು ಸಾಧ್ಯ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತಿರುವ ದಂಧೆಕೋರರಿಗೆ ಕಾಂಗ್ರೆಸ್ ಸರ್ಕಾರ ನಮ್ಮ ಪರವಾಗಿದೆ ಎಂಬ ಹುಂಬ ಧೈರ್ಯ ಇರಬಹುದು. ಅದಕ್ಕೆ ಪೊಲೀಸರು ಕಾನೂನಿನ ಪ್ರಕಾರವೇ ಉತ್ತರ ಕೊಡಬೇಕು. ಗೋಹತ್ಯಾ ನಿಷೇಧ ಕಾನೂನಿನಂತೆ ಆರೋಪಿಗಳಿಗೆ ಗರಿಷ್ಠ ಶಿಕ್ಷೆ ಸಹಿತ ಅಕ್ರಮಕ್ಕೆ ಬಳಸಿದ ವಾಹನ ಹಾಗೂ ಸ್ಥಳವನ್ನು ಮುಟ್ಟುಗೋಲು ಹಾಕಿಕೊಂಡು ತಕ್ಕ ಶಾಸ್ತಿ ಮಾಡಬೇಕು. ಇಲ್ಲದಿದ್ದರೆ ಮುಂದೇನಾದರೂ ಅನಾಹುತಗಳು ನಡೆದರೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಕಾಮತ್ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article