ಸುಧಾಕರ್ ಜೋಶಿ ಅವರನ್ನು ಸನ್ಮಾನಿಸಿದ ಶಾಸಕ ಕಾಮತ್

ಸುಧಾಕರ್ ಜೋಶಿ ಅವರನ್ನು ಸನ್ಮಾನಿಸಿದ ಶಾಸಕ ಕಾಮತ್


ಮಂಗಳೂರು: ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಾಬ್ಧಿಯ ಅಂಗವಾಗಿ ಬಿಜೆಪಿ ವತಿಯಿಂದ ದೇಶಾದ್ಯಂತ ವಾಜಪೇಯಿಯವರು ಜೀವಿತಾವಧಿಯಲ್ಲಿ ಭೇಟಿ ಮಾಡಿದ್ದ ಬಿಜೆಪಿಯ ಹಿರಿಯರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ನಡೆಯುತ್ತಿದ್ದು, ಮಂಗಳೂರು ನಗರ ದಕ್ಷಿಣ ಬಿಜೆಪಿ ವತಿಯಿಂದ ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಸೆಂಟ್ರಲ್ ವಾರ್ಡ್ ನಿವಾಸಿಯಾದ ಸುಧಾಕರ್ ಜೋಶಿ ಅವರನ್ನು ಸನ್ಮಾನಿಸಲಾಯಿತು.

ಬಳಿಕ ಅವರು ಮಾತನಾಡಿ, ಶ್ರೀಯುತರು ಜನಸಂಘದ ಕಾಲದಿಂದಲೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದು, ವಾಜಪೇಯಿ‌ಯಂತಹ ಅದ್ಭುತ ನಾಯಕನ ಜೊತೆ ಒಡನಾಟ ಹೊಂದಿದ್ದರು. ಇಂತಹ ಹಿರಿಯರನ್ನು ಭೇಟಿ ಮಾಡಿ ಗೌರವಿಸುವುದು ನಮ್ಮ ಪಾಲಿನ ಸೌಭಾಗ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ, ಪ್ರೇಮಾನಂದ ಶೆಟ್ಟಿ, ಯತೀಶ್ ಅರ್ವರ್, ಪೂರ್ಣಿಮಾ, ಶಕೀಲಾ ಕಾವಾ, ಸತೀಶ್ ಪ್ರಭು, ಅಶ್ವಿತ್ ಕೊಟ್ಟಾರಿ, ಗೌತಮ್ ಕೋಡಿಕಲ್, ಪೂರ್ಣಿಮಾ ರಾವ್, ರವಿಶಂಕರ್ ಮಿಜಾರ್, ಭಾಸ್ಕರ ಚಂದ್ರ ಶೆಟ್ಟಿ, ನಿತಿನ್ ಕುಮಾರ್, ರಾಜಗೋಪಾಲ್ ರೈ, ನಾರಾಯಣ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article