
ಮಕ್ಕಳಲ್ಲಿ ಧಾಮಿ೯ಕತೆಯ ರುಚಿಯನ್ನು ಹುಟ್ಟಿಸಿ: ಗುರುದೇವಾನಂದ ಸ್ವಾಮೀಜಿ
ಮೂಡುಬಿದಿರೆ: ಧರ್ಮವೆಂಬುದು ನಂದಾದೀಪ ಇದ್ದಂತೆ. ಸಂರಕ್ಷಣೆ ಮಾಡಿದ ಧರ್ಮದಿಂದ ಮಾತ್ರ ನಮ್ಮ ರಕ್ಷಣೆ ಸಾಧ್ಯ ಆದ್ದರಿಂದ ಮಕ್ಕಳಿಗೆ ಧಾಮಿ೯ಕತೆಯ ರುಚಿಯನ್ನು ಹುಟ್ಟಿಸಬೇಕು ಎಂದು ಒಡಿಯೂರು ಹುರು ದೇವದತ್ತ ಸಂಸ್ಥಾನದ ಶ್ರೀ ಗುರು ದೇವಾನಂದ ಸ್ವಾಮೀಜಿ ನುಡಿದರು.
ಶ್ರೀ ನಡ್ಯೋಡಿ ದೈವಸ್ಥಾನ ಮಾರ್ಪಾಡಿ-ಕಲ್ಲಬೆಟ್ಟು ಇಲ್ಲಿ ನಡೆದ ಬಹ್ಮಕಲಶೋತ್ಸವ ಸಂದರ್ಭ ನೂತನ ನಿರ್ಮಿತ ರಾಜಗೋಪುರವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಅಹಂಕಾರವಿರುವಲ್ಲಿ ಧರ್ಮ ಇರಲು ಸಾಧ್ಯವಿಲ್ಲ. ಕಲ್ಲು ನೀರು ಸಹಿತ ಪಂಚ ಭೂತಾತ್ಮಕಗಳಲ್ಲಿ ನಾವು ದೇವರನ್ನು ಕಾಣುತ್ತೇವೆ. ನಂಬಿಕೆಯಿದ್ದರೆ ದೈವೀ ಶಕ್ತಿ ನಮ್ಮನ್ನು ಮುನ್ನಡೆಸುತ್ತದೆ. ಆತ್ಮವಿಶ್ವಾಸವಿದ್ದರೆ ಯಾವುದನ್ನು ಬೇಕಾದರೂ ಎದುರಿಸಿ ಯಶಸ್ವಿಯಾಗಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ಮಾತನಾಡಿ, ಪರಶುರಾಮನ ಪುಣ್ಯಭೂಮಿ ಯಾಗಿರುವ ತುಳುನಾಡು ಭಾರತ ದೇಶದ ದೇವರ ಕೋಣೆಯಿದ್ದಂತೆ. ಅನಿಷ್ಟ ವಿನಾಶಗಳಾವುದೂ ತುಳುನಾಡಿನಲ್ಲಿ ಇದ್ದ ಉದಾಹರಣೆಯಿಲ್ಲ, ಇಂತಹ ತುಳುನಾಡಿನಲ್ಲಿ ನಡೆಯುವ ಬಹ್ಮಕಲಶ ಹಿಂದೂ ಸಮಾಜಕ್ಕೆ ಮಾಡುವ ಬ್ರಹ್ಮಕಲಶವಾಗಿದೆ ಎಂದು ಹೇಳಿದರು.
ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ ಜೈನ್ ಮತ್ತು ಕಂಬಳ ಕೋಣಗಳ ಯಜಮಾನ ಇರುವೈಲು ಪಾಣಿಲ ಸತೀಶ್ಚಂದ್ರ ಸಾಲಿಯಾನ್ ಹಾಗೂ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಶಿಕ್ಷಕ ವೈ. ಶಶಿಕಾಂತ್ ಅವರನ್ನು ಧಾರ್ಮಿಕ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಜೀಣೋ೯ದ್ಧಾರ ಸಮಿತಿಯ ಅಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಎಂ.ಸಿ.ಎಸ್. ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಮಾರೂರು ಖಂಡಿಗ ರಾಮದಾಸ ಆಸ್ರಣ್ಣ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಶ್ರೀ ಪದ್ಮಾ ಕ್ರಷರ್ ಮಾಲಕ ಐತಪ್ಪ ಆಳ್ವ, ಜಯಂತಿ ಎಸ್. ಕೋಟ್ಯಾನ್, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಸಮಿತಿಯ ಗೌರವಾಧ್ಯಕ್ಷರುಗಳಾದ ಪುರುಷೋತ್ತಮ ಶೆಟ್ಟಿ, ಆನಂದ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸೇವಾ ಸಮಿತಿ ಅಧ್ಯಕ್ಷ ಕೆ. ಪ್ರದೀಪ್ ರೈ ಉಪಸ್ಥಿತರಿದ್ದರು.
ದಿಲೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಗೀತಾ ಪಿ. ಶೆಟ್ಟಿ, ಪ್ರಶಾಂತ್ ಶೆಟ್ಟಿ ಮತ್ತು ವೈ. ವಿಶ್ವನಾಥ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಪ್ರಸನ್ನ ಹೆಗ್ಡೆ ಸಹಕರಿಸಿದರು. ಅಂದು ಪೂರ್ವಾಹ್ನ ಶ್ರೀ ಮಾಯಂದಲೆ ದೇವಿಯ ವಿಗ್ರಹ ಪುನರ್ ಪ್ರತಿಷ್ಠೆ, ಬಹ್ಮಕಲಶೋತ್ಸವ ಸಂಜೆ ದೈವಗಳ ಗಗ್ನರ ಸೇವೆ ಜರಗಿತು. ರಾತ್ರಿ ಯಕ್ಷಗಾನ ಪ್ರದರ್ಶನಗೊಂಡಿತು.