‘ಶಿವಾಜಿಯನ್ನು ವಿರೋಧಿಸುವವರು ನಾಟಕ ನೋಡಿ’: ವಿಜಯ್ ಕುಮಾರ್ ಕೊಡಿಯಾಬೈಲ್

‘ಶಿವಾಜಿಯನ್ನು ವಿರೋಧಿಸುವವರು ನಾಟಕ ನೋಡಿ’: ವಿಜಯ್ ಕುಮಾರ್ ಕೊಡಿಯಾಬೈಲ್


ಮಂಗಳೂರು: ‘ಶಿವಾಜಿ ಹಿಂದೂ ಧರ್ಮದ ರಕ್ಷಕ ಆದರೆ ಅನ್ಯಧರ್ಮದ ದ್ವೇಷಿಯಲ್ಲ. ಇತಿಹಾಸವನ್ನು ತಿರುಚಿದವರು ಮಾತ್ರ ಅಪಚಾರ ಮಾಡುತ್ತಿದ್ದಾರೆ ಶಿವಾಜಿಯನ್ನು ಅರಿತವರು ಅವರಂತಹ ಒಬ್ಬ ಒಳ್ಳೆಯ ಸಾಮ್ರಾಟನನ್ನು ಕೊಂಡಾಡುತ್ತಾರೆ. ಶಿವಾಜಿಯ ಸಂಪೂರ್ಣ ಕಥೆ ತಿಳಿದುಕೊಂಡರೆ ಅವರೆಂತಹ ಅನ್ಯಧರ್ಮ ಸಹಿಷ್ಣು ಎನ್ನುವುದು ತಿಳಿಯುತ್ತದೆ. ಶಿವಾಜಿಯ ಬಗ್ಗೆ ತಿಳಿಯದವರು ನಮ್ಮ ಮುಂದಿನ ಚಾರಿತ್ರಿಕ ನಾಟಕ ‘ಶಿವಾಜಿ’ ಯನ್ನು ನೋಡಬೇಕು. ಅವರ ಶಿವಾಜಿ ಬಗೆಗಿನ ಅಭಿಪ್ರಾಯ ಬದಲಾಗುತ್ತದೆ‘ ಎಂದು ಹಿರಿಯ ರಂಗಕರ್ಮ, ನಿರ್ದೇಶಕ  ವಿಜಯ್ ಕುಮಾರ್ ಕೊಡಿಯಾಬೈಲ್ ತಿಳಿಸಿದ್ದಾರೆ.

ಮಂಗಳವಾರ ಸಂಜೆ ತನ್ನ ನಿವಾಸದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ’ಶಿವಾಜಿ ನಾಟಕ ಮಾ.6ರಂದು ಕಟೀಲು ಕ್ಷೇತ್ರದಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಮಾಚ್೯ 13 ರಂದು ಪುರಭವನದಲ್ಲಿ ಪ್ರದರ್ಶನ ಕಾಣಲಿದೆ. ನಾಟಕದ ಟೈಟಲ್ ಹಾಡು ಕನ್ನಡ ಭಾಷೆಯಲ್ಲಿದ್ದರೆ ತುಳುವಿನಲ್ಲಿ ಸಂಭಾಷಣೆ ಇರಲಿದೆ. ಹಿಂದಿ ಭಾಷೆಯನ್ನು ಕೂಡ ಬಳಕೆ ಮಾಡುವ ಮೂಲಕ ಭಾಷಾ ಸಾಮರಸ್ಯಕ್ಕೆ ಒತ್ತು ನೀಡಲಾಗಿದೆ. ಕಥೆ ರಚನೆಕಾರ ಶಶಿರಾಜ್ ರಾವ್ ಕಾವೂರು ತುಂಬಾ ಕಷ್ಟಪಟ್ಟು ಕಥೆ ರಚಿಸಿದ್ದಾರೆ. ಒಟ್ಟು 3 ಹಾಡುಗಳಿದ್ದು ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಟೈಟಲ್ ಸಾಂಗ್ ಹೆಸರಾಂತ ಗಾಯಕ ಕೈಲಾಶ್ ಖೇರ್ ಹಾಡಬೇಕಿತ್ತು ಆದರೆ ಅವರು ೨೫ ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದರಿಂದ ಕೈಬಿಡಬೇಕಾಯಿತು. ಬೇರೆ ಪ್ರಸಿದ್ಧ ಗಾಯಕರಿಂದ ಹಾಡಿಸಲು ಪ್ರಯತ್ನ ಮುಂದುವರಿದಿದೆ‘ ಎಂದರು. 

’ಪ್ರೀತೇಶ್ ಬಳ್ಳಾಲ್ ಬಾಗ್ ಇತ್ತೀಚಿನ 70 ಶೋಗಳಲ್ಲಿ ಶಿವದೂತೆ ಗುಳಿಗೆ ನಾಟಕದಲ್ಲಿ ಗುಳಿಗನ ಪಾತ್ರಕ್ಕೆ ಬಣ್ಣ ಹಚ್ಚಿದ್ದು ಶಿವಾಜಿ ಪಾತ್ರದಲ್ಲೂ ಅವರೇ ಇರಲಿದ್ದಾರೆ. ಪ್ರಮೋದ್ ಮರವಂತೆ, ಶಶಿರಾಜ್ ಕಾವೂರು ಸಾಹಿತ್ಯ ಬರೆದಿದ್ದಾರೆ. ಶಿವಾಜಿ ಪಾತ್ರಕ್ಕೆ ನಟ ಪೃಥ್ವಿ ಅಂಬರ್ ಕಂಠದಾನ ಮಾಡಿದ್ದರೆ ಗುರು ದಾದಾಜಿ ಪಾತ್ರಕ್ಕೆ ನವೀನ್ ಡಿ ಪಡೀಲ್ ಧ್ವನಿ ನೀಡಿದ್ದಾರೆ. ಪಟ್ಲ ಸತೀಶ್ ಶೆಟ್ಟಿ, ಡಾ ದೇವದಾಸ್ ಕಾಪಿಕಾಡ್ ಹಾಡಿದ್ದು ಹಾಡುಗಳು ಸೊಗಸಾಗಿ ಮೂಡಿಬಂದಿದೆ“ ಎಂದರು. 

ಶಿವಾಜಿಯಂತ ರಾಜ ಬೇರೆ ಇಲ್ಲ...

ಶಿವಾಜಿ ಎಲ್ಲ ಜಾತಿ ಧರ್ಮದ ಜನರನ್ನು ಸಮಾನವಾಗಿ ಕಂಡವರು. ಅವರಿಗೆ ಅವರೇ ಸಾಟಿ. ಶಿವಾಜಿ ಒಬ್ಬ ದರೋಡೆಕೋರ ಅನ್ಯಧರ್ಮದ ದ್ವೇಷಿ ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಾರೆ. ಇದು ಖಂಡಿತಾ ಸರಿಯಲ್ಲ. ಶಿವಾಜಿಯ ಬಗ್ಗೆ ಅವರ ಸಾಮ್ರಾಜ್ಯ ಮತ್ತು ಆಡಳಿತದ ಬಗ್ಗೆ ಪಟ್ಟಾಭಿಷೇಕದ ಬಗ್ಗೆ ನಾಟಕದಲ್ಲಿ ವಾಸ್ತವವನ್ನು ತೆರೆದಿಡುವ ಪ್ರಯತ್ನ ಮಾಡಲಾಗಿದೆ. ಎಲ್ಲರೂ ನಾಟಕ ನೋಡಿ ಎಂದು  ಶಶಿರಾಜ್ ರಾವ್ ಕಾವೂರು ಹೇಳಿದರು.

ಮಣಿಕಾಂತ್ ಕದ್ರಿ, ಎ ಕೆ ವಿಜಯ್, ಪ್ರೀತೇಶ್ ಬಳ್ಳಾಲ್ ಭಾಗ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article