
ದೈವ-ದೇವರ ಮೇಲೆ ಇಟ್ಟಿರುವ ನಂಬಿಕೆಯಿಂದ ಹಿಂದೂ ಸಮಾಜ ಬಲಿಷ್ಠ: ಕಿಶೋರ್ ಕುಮಾರ್
ಮೂಡುಬಿದಿರೆ: ನಾವು ದೈವ ದೇವರುಗಳ ಮೇಲೆ ನಾವು ಇಟ್ಟಿರುವ ನಂಬಿಕೆಯಿಂದ ಹಿಂದು ಸಮಾಜ ಸೋಲದೆ ಬಲಿಷ್ಠವಾಗುತ್ತದೆ. ನಿರಂತರ ನಡೆಯುವ ಪೂಜೆ ಪುರಸ್ಕಾರ, ನೇಮೋತ್ಸವಗಳಿಂದ ಶಕ್ತಿ ಪ್ರಾಪ್ತಿಯಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಹೇಳಿದರು.
ಅವರು ಮಾರ್ಪಾಡಿ-ಕಲ್ಲಬೆಟ್ಟು ಶ್ರೀ ನಡ್ಯೋಡಿ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪವಾಡ ಪುರುಷರಿಂದಾಗಿ ಹಿಂದೂ ಧಮ೯ಕ್ಕೆ ಶಕ್ತಿ ತುಂಬಿದೆ. ಸ್ತ್ರೀ ಶಕ್ತಿ ಜಾಗೃತವಾದರೆ ಹಿಂದೂ ಸಮಾಜ ಬೆಳೆಯುತ್ತದೆ ಎಂದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಉದ್ಯಮಿ ಕೆ. ಶ್ರೀಪತಿ ಭಟ್ ಮಾತನಾಡಿ, ಜಗತ್ತು ಇಂದು ಆಧುನೀಕತೆಯ ಕಡೆಗೆ ಸಾಗುತ್ತಿದ್ದರೂ ನಮ್ಮ ಪರಂಪರೆಯನ್ನು ಬಿಡವೆ ದೈವ ದೇವಸ್ಥಾನಗಳ ನವೀಕರಣ ಹಾಗೂ ಪುನರ್ ನಿರ್ಮಾಣದ ಕಾರ್ಯಕ್ರಮ ಎಲ್ಲಾ ಕಡೆ ನಡೆಯುತ್ತಿರುವುದರಿಂದ ಸನಾತನ ಧರ್ಮದ ಬಗ್ಗೆ ಅರಿವು ಜಾಗೃತವಾಗಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಉದ್ಯಮಿ ತಿಮ್ಮಯ್ಯ ಶೆಟ್ಟಿ, ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್, ಪುರಸಭೆಯ ಸದಸ್ಯರುಗಳಾದ ಮಮತಾ ಆನಂದ, ಸುಜಾತಾ ಶಶಿಕಿರಣ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸೇವಾ ಸಮಿತಿಯ ಅಧ್ಯಕ್ಷ ಕೆ. ನಡೆದ ಸಭಾ ಕಾರ್ಯಕ್ರಮದಲ್ಲಿ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರಗಳಾದ ಉದಯಕುಮಾರ್ ಜೈನ್, ಚೆನ್ನಯ ಕೋಟ್ಯಾನ್, ನಡೋಡಿ ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ಪಿ. ಶೆಟ್ಟಿ, ಗೌರವಾಧ್ಯಕ್ಷೆ ಸುಹಿಯಾ ಎ. ಜೈನ್, ಕಾರ್ಯದರ್ಶಿ ಹೇಮಾವತಿ ಮತ್ತಿತರರು ಉಪಸ್ಥಿತರಿದ್ದರು.
ಕ್ಷೇತ್ರದ ಜೀರ್ಣೋದ್ದಾರ ಕಾರ್ಯವನ್ನು ಯಶಸ್ವಿಯಾಗಿ ಮುನ್ನಡೆಸಿದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ, ದೈವಸ್ಥಾನದ ಆಸ್ರಣ್ಣರಾದ ಅಸ್ಪಣ್ಣ, ಹಲವು ವರ್ಷಗಳಿಂದ ದೈವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವ ಕೊರಗ ಪೂಜಾರಿ ಬರಂಗಾಡಿ, ಮೋಹನ ಮಡಿವಾಳ ಕೋಟೆವಾಗಿಲ ದೈವ ನರ್ತಕ ನಾರಾಯಣ ಪರವ ಮಾರೂರು, ನಾರಾಯಣ ಭಂಡಾರಿ ಕಲ್ಲಬೆಟ್ಟು, ವಾಮನ ಪೂಜಾರಿ ಬಿರ್ಮಜಲು, ಜಯ ಆಚಾರ್ಯ ಮರಿಯಾಡಿ, ಆನಂದ ಮೂಲ್ಯ ಕಲ್ಲಬೆಟ್ಟು ಪ್ರಕಾಶ ಮಾರೂರು ಹಾಗೂ ನವೀನ್ ಕೋಟ್ಯಾನ್ ಇದೆಬೈಲುಗುತ್ತು ಅವರನ್ನು ಸನ್ಮಾನಿಸಲಾಯಿತು.
70ಕ್ಕೂ ಹೆಚ್ಚು ದಾನಿಗಳಿಗೆ ಗೌರವಾರ್ಪಣೆ ಮಾಡಲಾಯಿತು. ಸೇವಾ ಸಮಿತಿಯ ಸ್ವಾಗತಿಸಿದರು. ಧನ್ಯ, ರಕ್ಷಿತಾ ಮತ್ತು ಸ್ವಾತಿ ಪ್ರಾರ್ಥಿಸಿದರು. ನಿತೇಶ್ ಮಾನಾ೯ಡ್ ಕಾಯ೯ಕ್ರಮ ನಿರೂಪಿಸಿದರು.