
ಪುತ್ತಿಗೆಯಲ್ಲಿ ಜುಗಾರಿ ಅಡ್ಡೆಗೆ ದಾಳಿ: ಮೂವರು ಪೊಲೀಸರ ವಶಕ್ಕೆ
Tuesday, March 11, 2025
ಮೂಡುಬಿದಿರೆ: ಪುತ್ತಿಗೆಯ ಒಬ್ಬೆಟ್ಟುಪಲ್ಕೆ ಬಳಿಯಲ್ಲಿರುವ ಗುಡ್ಡೆಯಲ್ಲಿ ಇಸ್ಪೀಟು ಆಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಸೋಮವಾರ ರಾತ್ರಿ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಒಬ್ಬೆಟ್ಟುಪಲ್ಕೆ ಬಳಿ ಗುಡ್ಡೆಯಲ್ಲಿ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ದಾಳಿ ನಡೆಸಿದ ಪೊಲೀಸರು ಉಲಾಯಿ-ಪಿದಾಯಿ ಆಟದಲ್ಲಿ ನಿರತರಾಗಿದ್ದ ರಾಜೇಶ್ ಪೂಜಾರಿ, ರಮೇಶ್ ಭಂಡಾರಿ ಮತ್ತು ಓಸ್ವಲ್ಡ್ ಪಿಂಟೋ ಎಂಬುವರನ್ನು ಸಿಬ್ಬಂದಿಗಳ ಸಹಾಯದಿಂದ ಸುತ್ತುವರೆದು ಹಿಡಿದಿದ್ದಾರೆ. ಪ್ರೇಮ್ ಕುಮಾರ್, ಕಿರಣ್ ಮತ್ತು ಜೀವನ್ ಬಳ್ಳಾಲ್ ಎಂಬವರು ತಪ್ಪಿಸಿಕೊಂಡಿದ್ದಾರೆ. ಜುಗಾರಿ ಆಟಕ್ಕೆ ಉಪಯೋಗಿಸಿದ 3 ಸಾವಿರ ರೂ.ನಗದು, 52 ಇಸ್ಪೀಟ್ ಎಲೆಗಳು, 2 ಮೇಣದ ಬತ್ತಿ ಹಾಗೂ 2 ವಾಹನಗಳನ್ನು ಮಹಜರು ಮೂಲಕ ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.