
ಕುಕ್ಕೆಯಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಪ್ ಅವರಿಂದ ಸರ್ಪಸಂಸ್ಕಾರ ಸೇವೆ
Tuesday, March 11, 2025
ಸುಬ್ರಹ್ಮಣ್ಯ: ಬಾಲಿವುಡ್ ನಟಿ ಕತ್ರಿನಾ ಕೈಫ್ ಇಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಎರಡು ದಿನಗಳ ಸರ್ಪಸಂಸ್ಕಾರ ಸೇವೆಯಲ್ಲಿ ಪಾಲ್ಗೊಂಡಿದ್ದಾರೆ.
ದಕ್ಷಿಣ ಭಾರತದ ಸುಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಮಣ್ಯಕ್ಕೆ ಅನೇಕ ಬಾಲಿವುಡ್, ಹಾಲಿವುಡ್ ನಟ ನಟಿಯರು ಆಗಮಿಸುತ್ತಿದ್ದು ಸಂತಾನ ಭಾಗ್ಯವಿಲ್ಲದವರು, ಚರ್ಮರೋಗ ವ್ಯಾಧಿ, ಆರೋಗ್ಯ ವೃದ್ಧಿಗಾಗಿ ಸೇವೆಯನ್ನು ಸಲ್ಲಿಸುವಂಥದ್ದು ಸರ್ವೇಸಾಮಾನ್ಯವಾಗಿದೆ.
ಅದೇ ರೀತಿ ಕತ್ರಿನಾ ಕೈಫ್ ಅವರು ಕೂಡ ಕುಕ್ಕೆ ಸುಬ್ರಹ್ಮಣ್ಯನ ಸೇವೆಯನ್ನ ಸಲ್ಲಿಸುವುದಕ್ಕೋಸ್ಕರ ಎರಡು ದಿನಗಳ ಸರ್ಪ ಸಂಸ್ಕಾರ ಸೇವೆಯಲ್ಲಿ ಪಾಲ್ಗೊಳ್ಳಲಿರುವರು ಎಂದು ಹೇಳಲಾಗಿದೆ.
ಇಂದು ಆರಂಭವಾದ ಸರ್ಪ ಸಂಸ್ಕಾರ ಸೇವೆಯು ನಾಳೆ ಮಧ್ಯಾಹ್ನ ತನಕ ಇರುವುದು. ಕತ್ರಿನಾ ಕೈಫ್ ಅವರೊಂದಿಗೆ ಅವರ ಬಂಧು ಮಿತ್ರರು ಕೂಡ ಆಗಮಿಸಿರುತ್ತಾರೆ.