
ಮೂಡುಬಿದಿರೆ ಬಂಟರ ಮಹಿಳಾ ಘಟಕದಲ್ಲಿ ಮಹಿಳಾ ದಿನಾಚರಣೆ
Sunday, March 9, 2025
ಮೂಡುಬಿದಿರೆ: ಇಲ್ಲಿನ ಬಂಟರ ಸಂಘದ ಮಹಿಳಾ ಘಟಕದ ಆಶ್ರಯದಲ್ಲಿ ರವಿವಾರ ಕನ್ನಡ ಭವನದಲ್ಲಿಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಘಟಕದ ಅಧ್ಯಕ್ಷೆ ಶೋಭಾ ಎಸ್. ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಯ೯ಕ್ರಮದಲ್ಲಿ ಮೂಡುಬಿದಿರೆ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರತಿಭಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಬೌದ್ಧಿಕವಾಗಿ ಮಹಿಳೆ ಸಬಲಳಾಗಬೇಕು ಎನ್ನುವ ಉದ್ದೇಶದಿಂದ ಮಹಿಳಾ ದಿನ ಆಚರಣೆ ಆರಂಭವಾಯಿತು ಎಂದರು. ಮಹಿಳೆಯರಿಗಾಗಿಯೇ ಇರುವ ಸರಕಾರದ ಯೋಜನೆಗಳ ಬಗ್ಗೆ, ಕಾನೂನಿನಬಗ್ಗೆ ಅವರು ಮಾಹಿತಿ ನೀಡಿದರು.
ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯದರ್ಶಿ ಅನಿತಾ ಶೆಟ್ಟಿ ನಿರೂಪಿಸಿ, ಕಾರ್ಯದರ್ಶಿ ಸೌಮ್ಯ ಎಸ್. ಶೆಟ್ಟಿ ವಂದಿಸಿದರು.