ಪುರಸಭಾ ಮಾಜಿ ಅಧ್ಯಕ್ಷರ ಪುತ್ರ ನಿಧನ

ಪುರಸಭಾ ಮಾಜಿ ಅಧ್ಯಕ್ಷರ ಪುತ್ರ ನಿಧನ


ಮೂಡುಬಿದಿರೆ: ಮೂಡುಬಿದಿರೆ ಪುರಸಭಾ ಮಾಜಿ ಅಧ್ಯಕ್ಷ ದಿ.ಪ್ರೇಮಾನಂದ ಪ್ರಭು ಅವರ  ಪುತ್ರ ಪ್ರಸಾದ್ ಪ್ರಭು (45) ಅವರು ಹೃದಯಾಘಾತದಿಂದ ಭಾನುವಾರ ರಾತ್ರಿ ನಿಧನರಾಗಿದ್ದಾರೆ.

ಮೂಡುಬಿದಿರೆಯಲ್ಲಿ ಜೆ.ಸಿ.ಬಿ ಮಾಲಕರಾಗಿದ್ದ ಅವರು ಸಾಧು ಸ್ವಭಾವದ ಯುವಕನಾಗಿ ಸರ್ವರೊಂದಿಗೂ ಉತ್ತಮ ಒಡನಾಟ ಹೊಂದಿದ್ದರು.

ಭಾನುವಾರ ಮಧ್ಯಾಹ್ನದ ವೇಳೆ ಎದೆನೋವು ಕಾಣಿಸಿಕೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದರು.ಆದರೆ ರಾತ್ರಿ ವೇಳೆ ಉಸಿರಾಟದ ಸಮಸ್ಯೆಯಿಂದಾಗಿ ಹೃದಯಾಘಾತದಿಂದ ನಿಧನರಾದರೆಂದು ತಿಳಿದು ಬಂದಿದೆ.

ಪ್ರಸಾದ್ ಪ್ರಭು ಅವರು ವಿವಾಹಿತರಾಗಿದ್ದು ಓರ್ವ ಪುತ್ರನಿದ್ದಾನೆ.

ಅವರ ಅಂತಿಮ ಕ್ರಿಯೆ ಇಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ ಎಂದು ಅವರ ಹತ್ತಿರದ ಸಂಬಂಧಿ, ಪುರಸಭಾ ಸದಸ್ಯ ಸುರೇಶ್ ಪ್ರಭು ಅವರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article