
ರಥಬೀದಿ ಕಾಲೇಜಿನ ಎನ್.ಎಸ್.ಎಸ್. ಘಟಕಗಳಿಂದ 'ವಾರಂತ್ಯ ಶಿಬಿರ'
Monday, March 10, 2025
ಮಂಗಳೂರು: ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕ 1, 2 ಮತ್ತು 3 ರ ಸ್ವಯಂ ಸೇವಕರುಗಳ 'ವಾರಂತ್ಯ ಶಿಬಿರ' ಮಾ.8 ರಂದು ಮಂಗಳೂರಿನ ಮಲ್ಲಿಕಟ್ಟೆ, ಕದ್ರಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಶಿಬಿರದಲ್ಲಿ ಎನ್.ಎಸ್.ಎಸ್. ಘಟಕಗಳ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಲೋಕೇಶ್ ನಾಥ್, ಶ್ರೀಮತಿ ಶಾಂತಿ, ಡಾ. ಮೋಹನ್ ದಾಸ್, ಶಾಲೆಯ ಮುಖ್ಯೋಫಾದ್ಯಾಯರಾದ ಶ್ರೀಮತಿ ಡೋರತಿ, ಶಾಲೆಯ ಶಿಕ್ಷಕರುಗಳು, 90 ಸ್ವಯಂ ಸೇವಕರು ಭಾಗವಹಿಸಿದ್ದರು.