ಬಾವಿಗೆ ಬಿದ್ದ ಚಿರತೆಯ ರಕ್ಷಿಸಿದ ಮೂಡುಬಿದಿರೆ ಅರಣ್ಯಾಧಿಕಾರಿಗಳು

ಬಾವಿಗೆ ಬಿದ್ದ ಚಿರತೆಯ ರಕ್ಷಿಸಿದ ಮೂಡುಬಿದಿರೆ ಅರಣ್ಯಾಧಿಕಾರಿಗಳು


ಮೂಡುಬಿದಿರೆ: ತಾಲೂಕಿನ ಹೊಸಬೆಟ್ಟು ಗ್ರಾಮದ ಬಿರಾವು ಶಾಂತಿ ನಿವಾಸ ವಿಲಿಯಮ್ ಕುಟ್ಟಿನ್ಹ ಎಂಬುವರ ಮನೆಯ ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಶನಿವಾರ ನಡೆದಿದೆ.

ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ ಅವರ ನಿರ್ದೇಶನದಂತೆ, ಮೂಡುಬಿದಿರೆ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಜಿ. ಅವರ ಮಾರ್ಗದರ್ಶನದಲ್ಲಿ ಅರವಳಿಕೆ ತಜ್ಞರಾದ ಡಾ. ಮೇಘನಾ ಅವರು ಬೋನ್ ಮೂಲಕ ಬಾವಿಗೆ ಇಳಿದು ಚಿರತೆಗೆ ಅರವಳಿಕೆ ಚುಚ್ಚು ಮದ್ದು ನೀಡಿ ನಂತರ ಚಿಕಿತ್ಸೆ ನೀಡಿರುತ್ತಾರೆ.


ಮಂಜುನಾಥ ಗಾಣಿಗ ಐಸಿಟಿ ವಲಯ ಅರಣ್ಯಾಧಿಕಾರಿ, ಉಪ ವಲಯ ಅರಣ್ಯಾಧಿಕಾರಿಗಳಾದ ರಾಘವೇಂದ್ರ ಶೆಟ್ಟಿ, ಗುರುಮೂರ್ತಿ, ಬಸಪ್ಪ ಹಲಗೇರ, ಆನಂದ, ಗಸ್ತು ಅರಣ್ಯ ಪಾಲಕರಾದ ರಾಜೇಶ್, ಚಂದ್ರಶೇಖರ್, ಸಂದೇಶ್, ಶಂಕರ, ಮನೀಶ್, ಅರಣ್ಯ ವೀಕ್ಷಕರಾದ  ಸುಧಾಕರ, ರಂಜನ್ ಕಾಯ೯ಚರಣೆಯಲ್ಲಿ ಪಾಲ್ಗೊಂಡಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article