
ಅಲ್ಪಸಂಖ್ಯಾತರ ಓಲೈಕೆಯ ಬಜೆಟ್: ದಿನೇಶ್ ಪುತ್ರನ್ ಆಕ್ರೋಶ
Saturday, March 8, 2025
ಮೂಡುಬಿದಿರೆ: ಸಿದ್ಧರಾಮಯ್ಯ ಸರಕಾರವು ಈ ಬಾರಿ ಮಂಡಿಸಿರುವ ಬಜೆಟ್ ಅಲ್ಪಸಂಖ್ಯಾತರ ಮತಗಳ ಓಲೈಕೆಗಾಗಿ ಮಾಡಿರುವ ಬಜೆಟ್ ಆಗಿದೆ ಎಂದು ಭಾರತೀಯ ಜನತಾ ಪಾಟಿ೯ಯ ಮೂಲ್ಕಿ ಮೂಡುಬಿದಿರೆ ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಜೆಟ್ ನಲ್ಲಿ ಮುಸ್ಲಿಂ ಸಮುದಾಯದ ಓಟ್ ಬ್ಯಾಂಕ್ ಗಾಗಿ ಶಿಕ್ಷಣ, ಗುತ್ತಿಗೆದಾರಿಕೆ, ಆರೋಗ್ಯ ಸಹಿತ ಎಲ್ಲಾ ಮೂಲಭೂತ ಸೌಕಯ೯ಗಳನ್ನು ಒಂದೇ ಸಮುದಾಯಕ್ಕೆ ಮೀಸಲಿರಿಸಿದ್ದು ಇದನ್ನು ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕಿದ ಸಾಮಾನ್ಯ ಹಿಂದೂಗಳು ನೆನಪಿಟ್ಟುಕೊಳ್ಳಬೇಕಾಗಿದೆ ಎಂದರು.