
ಸಂತ ಫಿಲೋಮಿನಾ ಕಾಲೇಜಿಗೆ ನಾಲ್ಕು ರ‍್ಯಾಂಕ್‌ಗಳು
Friday, March 14, 2025
ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯವು ನಡೆಸಿದ 2023-24ನೇ ಸಾಲಿನ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಕಾಲೇಜಿಗೆ ನಾಲ್ಕು ರ‍್ಯಾಂಕ್‌ಗಳು ಲಭಿಸಿವೆ.
ಬಿಎಸ್ಸಿಯ ಸನ್ಮತಿ ಎಸ್. ಇವರು 4042 ಅಂಕಗಳೊಂದಿಗೆ 97.4% ಪಡೆದು ಎರಡನೆಯ ರ‍್ಯಾಂಕ್ ಅನ್ನು ಗಳಿಸಿದ್ದಾರೆ. ಇವರು ಪುತ್ತೂರಿನ ಕೆಮ್ಮಂಜೆಯ ನಿವಾಸಿ ಶಾಂತಪ್ಪ ಪೂಜಾರಿ ಕೆ. ಹಾಗೂ ಕಸ್ತೂರಿ ಪಿ. ದಂಪತಿಗಳ ಪುತ್ರಿ.
ಬಿಸಿಎಯ ಚೈತಾಲಿ ಎಸ್. ಇವರು 4357 ಅಂಕಗಳೊಂದಿಗೆ 95.76% ಪಡೆದುಕೊಂಡು ನಾಲ್ಕನೆಯ ರ‍್ಯಾಂಕ್ ಅನ್ನು ಗಳಿಸಿರುತ್ತಾರೆ. ಇವರು ಅರಿಯಡ್ಕದ ಸತೀಶ್ ಶೆಟ್ಟಿ ಹಾಗೂ ಅಮಿತಾ ದಂಪತಿಗಳ ಪುತ್ರಿ.
ಕಂಪ್ಯೂಟರ್ ಸೈನ್ಸ್ ಎಂಎಸ್ಸಿಯಲ್ಲಿ ಲಾವಣ್ಯ ಕೆ. ಇವರು 9.42 ಸಿಜಿಪಿಎ ಗಳೊಂದಿಗೆ ಮೊದಲ ರ‍್ಯಾಂಕ್‌ಪಡೆದಿದ್ದಾರೆ. ಇವರು ಸುಳ್ಯದ ದಿ. ವಿಠ್ಠಲ ಶರ್ಮ ಕೆ. ಮತ್ತು ಶಶಿಕಲಾ ಕೆ. ದಂಪತಿಗಳ ಪುತ್ರಿ.
ಎಂಎಸ್‌ಡಬ್ಲ್ಯೂನಲ್ಲಿ ಅರ್ಪಿತಾ ಅವರು 8.38 ಸಿಜಿಪಿಎಗಳೊಂದಿಗೆ ಮೂರನೇ ರ‍್ಯಾಂಕ್ ಪಡೆದಿದ್ದಾರೆ. ಇವರು ಕೋಡಿಂಬಳದ ಸೀತಾರಾಮ ಮತ್ತು ವಸಂತಿ ದಂಪತಿಗಳ ಪುತ್ರಿ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ, ಉಪನ್ಯಾಸಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.