
ಅಜ್ಜರಕಾಡು ಕಾಲೇಜಿಗೆ 4 ರ‍್ಯಾಂಕ್
Friday, March 14, 2025
ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2023-24ನೇ ಸಾಲಿನ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಅಜ್ಜರಕಾಡು ಡಾ.ಜಿ.ಶಂಕರ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನಾಲ್ಕು ರ‍್ಯಾಂಕ್ ಲಭಿಸಿದೆ.
ಬಿ.ಸಿ.ಎ.ಯ ಪ್ರತೀಕ್ಷಾ ಹಾಗೂ ವರ್ಷಿಣಿ ಏಳನೇ ರ‍್ಯಾಂಕ್ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಎಂ.ಎಸ್ಸಿ. (ರಸಾಯನಶಾಸ್ತ್ರ)ಯಲ್ಲಿ ಮೆಲಿಷಾ ಡೇಸಾ ದ್ವಿತೀಯ ರ‍್ಯಾಂಕ್, ಎಂ.ಕಾಂ.ನಲ್ಲಿ ಶ್ರೇಯಾ ಏಳನೇ ರ‍್ಯಾಂಕ್ ಪಡೆದಿದ್ದಾರೆ. ಎಂ.ಎಸ್ಸಿ ಗಣಿತಶಾಸ್ತ್ರ ದಲ್ಲಿ ೨ನೇ ಸ್ಥಾನ ಪಡೆದ ಅನುಷಾ ಅವರು ರಾಮಾನುಜನ್ ನಗದು ಪುರಸ್ಕಾರಕ್ಕೆ ಹಾಗೂ ಅಪೇಕ್ಷಾ ಪೂಜಾರಿ ಎಂ.ಎ ರಾಜ್ಯಶಾಸ್ತ್ರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಸಿಪ್ರಿಯನ್ ಕಾರ್ಮೆಲ್ಲೊ ನಗದು ಬಹುಮಾನಕ್ಕೆ ಭಾಜನರಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಪ್ರಾಂಶುಪಾಲ ಡಾ. ಶ್ರೀಧರಪ್ರಸಾದ ಕೆ. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.