ಇಂತಿಷ್ಟು ಅಂಕ ಲಭಿಸುವಂತೆ ದೈವಕ್ಕೆ ಮೊರೆಯಿಟ್ಟ ವಿದ್ಯಾರ್ಥಿ!
Wednesday, March 26, 2025
ಉಡುಪಿ: ಸಾಮಾನ್ಯವಾಗಿ ಪರೀಕ್ಷೆ ಎಂದರೆ ಭಯಪಡುವ ವಿದ್ಯಾರ್ಥಿಗಳು ತೇರ್ಗಡೆಯಾಗುವಂತೆ ಅಥವಾ ಗರಿಷ್ಟ ಅಂಕ ಬರುವಂತೆ ದೈವ ದೇವರಲ್ಲಿ ಮೊರೆ ಇಡುವುದು ಸಾಮಾನ್ಯ.
ಆದರೆ, ತನಗೆ ಇಂತಿಷ್ಟೇ ಅಂಕ ಬರಬೇಕೆಂದು ವಿದ್ಯಾರ್ಥಿ ಬೊಬ್ಬರ್ಯನಿಗೆ ಮೊರೆ ಇಟ್ಟು, ಕಾಣಿಕೆ ಹುಂಡಿಗೆ ಚೀಟಿ ಬರೆದುಹಾಕಿದ ಘಟನೆ ಕುಂದಾಪುರದಲ್ಲಿ ನಡೆದಿದ್ದು, ಚೀಟಿ ವೈರಲ್ ಆಗಿದೆ.
ಕುಂದಾಪುರ ಹೊಳಮಗ್ಗಿ ಹೊರ ಬೊಬ್ಬರ್ಯ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಈ ಚೀಟಿ ಲಭಿಸಿದ್ದು, ದೈವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಯುವಾಗ ವಿದ್ಯಾರ್ಥಿ ಜಸ್ಟ್ ಪಾಸ್ ಮಾಡುವಂತೆ ಕೋರಿದ್ದ ಚೀಟಿ ಲಭ್ಯವಾಗಿದೆ. ಅದರ ಫೋಟೋ ಇದೀಗ ಭಾರೀ ವೈರಲ್ ಆಗುತ್ತಿದೆ. ಚೀಟಿ ಬರೆದು ದೈವಕ್ಕೆ ಮೊರೆ ಇಟ್ಟವರು ಹುಡುಗನೋ ಹುಡುಗಿಯೋ ತಿಳಿದಿಲ್ಲ.
ಈಮಧ್ಯೆ, ಚೀಟಿಯನ್ನು ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಟ್ಟ ದೈವಸ್ಥಾನದ ಆಡಳಿತ ವರ್ಗದ ವಿರುದ್ಧ ಭಕ್ತರ ಆಕ್ರೋಶವೂ ವ್ಯಕ್ತವಾಗಿದೆ.