
ವಿದ್ಯುತ್ ಸಮಸ್ಯೆ ತಪ್ಪಿಸಲು ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆ: ಯು.ಟಿ. ಖಾದರ್
ಉಳ್ಳಾಲ: ಒಂದು ಕ್ಷೇತ್ರ ಅಭಿವೃದ್ಧಿ ಆಗಬೇಕಾದರೆ ವಿದ್ಯುತ್ ಸಂಪರ್ಕ ಅಗತ್ಯ ಇದೆ. ಈ ಕಾರಣದಿಂದಲೇ ಜೆಪ್ಪು ಉಪಕೇಂದ್ರದಿಂದ ತೊಕೊಟ್ಟು ಉಪಕೇಂದ್ರಕ್ಕೆ ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಸಲಾಗಿದೆ.ಇದರಿಂದ ವಿದ್ಯುತ್ ಸಮಸ್ಯೆ ಉಂಟಾಗುವುದಿಲ್ಲ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು
ಜೆಪ್ಪು ಉಪಕೇಂದ್ರದಿಂದ ತೊಕೊಟ್ಟು ಉಪಕೇಂದ್ರಕ್ಕೆ ಸುಮಾರು 5.73ಕೋಟಿ ರೂ. ವೆಚ್ಚದಲ್ಲಿ ಅಳವಡಿಸಿದ 33 ಕೆವಿ ಭೂಗತ ಕೇಬಲ್ ಮತ್ತು 15.5ಎಂವಿಎ ಶಕ್ತಿ ಪರಿವರ್ತಕಕ್ಕೆ ತೊಕ್ಕೊಟ್ಟು ಉಪ ಕೇಂದ್ರ ದಲ್ಲಿ ಪರೀಕ್ಷಾರ್ಥ ಚಾಲನೆ ನೀಡಿ ಮಾತನಾಡಿದರು
ಈ ಹಿಂದೆ ಕಾವೂರು ಮೆಸ್ಕಾಂನಿಂದ ಕೊಣಾಜೆಗೆ ಕೊಣಾಜೆಗೆ ವಿದ್ಯುತ್ ಪೂರೈಕೆ ಆಗುತ್ತಿದೆ.ಕೊಣಾಜೆಯಿಂದ ತೊಕ್ಕೊಟ್ಟು ಉಪ ಕೇಂದ್ರ ಕ್ಕೆ 20 ಕೆವಿ ವಿದ್ಯುತ್ ಸರಬರಾಜು ಆಗುತ್ತಿತ್ತು.ಈಗ ಜೆಪ್ಪು ಉಪಕೇಂದ್ರದಿಂದ ತೊಕೊಟ್ಟು ಉಪಕೇಂದ್ರಕ್ಕೆ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸಿದ ಹಿನ್ನೆಲೆಯಲ್ಲಿ
40 ಕೆವಿ ವಿದ್ಯುತ್ ಸರಬರಾಜು ಆಗುತ್ತಿದೆ. ಕೊಣಾಜೆ ಯಿಂದ ವಿದ್ಯುತ್ ಸರಬರಾಜಿಗೆ ಸಮಸ್ಯೆಯಾದರೆ ಮಂಗಳೂರಿನಿಂದ ವಿದ್ಯುತ್ ತರಿಸುವ ವ್ಯವಸ್ಥೆ ಈಗ ಆಗಿದೆ.ಇನ್ನು ವಿದ್ಯುತ್ ಕಡಿತ ಆಗುವುದು ತಪ್ಪುತ್ತದೆ. ಕ್ರಮೇಣ ಉಳ್ಳಾಲ, ಕೋಟೆಕಾರ್ ನಲ್ಲಿ ಇದೇ ಮಾದರಿಯಲ್ಲಿ ಕಾಮಗಾರಿ ನಡೆಯಲಿದೆ ಎಂದರು.
ಕಲ್ಲಾಪು ಸಜಿಪ ನೇರ ರಸ್ತೆ ನಿರ್ಮಾಣ ಯೋಜನೆ ಇದೆ ಕಡಲ್ಕೊರೆತ ಪರಿಹಾರ, ಮಹಿಳಾ ಕಾಲೇಜು ಘೋಷಣೆ ಈ ಬಾರಿಯ ಬಜೆಟ್ ನಲ್ಲಿ ಆಗಿದೆ ಪಾವೂರು ಉಳಿಯ ಸೇತುವೆ ಮಾತ್ರ ಬಾಕಿ ಉಳಿದಿದ್ದು, ಅದನ್ನು ಶೀಘ್ರ ಮಾಡಲಾಗುವುದು.
ಕೋಟೆಪುರದಿಂದ ತಲಪಾಡಿ ವರೆಗೆ ನೇರ ರಸ್ತೆ ನಿರ್ಮಾಣ ಮಾಡುವ ಯೋಜನೆ ಇದೆ ಎಂದು ಹೇಳಿದರು.
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದಯಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಟಿ.ಎಸ್. ಅಬ್ದುಲ್ಲ, ಯೂಸುಫ್ ಬಾವ, ರಾಜ್ಯ ವಕ್ಫ್ ಸದಸ್ಯ ರಝಿಯ ಇಬ್ರಾಹಿಂ, ಹರ್ಷರಾಜ್ ಮುದ್ಯ ಸುದರ್ಶನ್ ಶೆಟ್ಟಿ,ಟಿ.ಎಸ್.ಅಬೂಬಕರ್, ಮುಸ್ತಫಾ ಪಾವೂರು, ಬಾಜಿಲ್ ಡಿಸೋಜ, ಸುರೇಖ ಚಂದ್ರ ಹಾಸ್,ಮತಡಿ, ದಿನೇಶ್ ಕುಂಪಲ, ಸುರೇಶ್ ಭಟ್ನಗರ,ಮೊಹಮ್ಮದ್ ಮೋನು, ರೆಹ್ಮಾನ್ ಕೋಡಿಜಾಲ್ ,ನಗರಸಭೆ ಅಧ್ಯಕ್ಷೆ ಶಶಿಕಲಾ, ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್, ದಿನೇಶ್ ರೈ ಮತ್ತಿತರರು ಉಪಸ್ಥಿತರಿದ್ದರು. ರೋಹಿತ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.