
ತೋಟ ಹೌಸ್‌ಗೆ ಜಮಾಅತ್ ವತಿಯಿಂದ ನೂತನ ರಸ್ತೆಯ ಉದ್ಘಾಟನೆ
Friday, April 4, 2025
ಬಜಾಲ್: ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ವತಿಯಿಂದ ಇಲ್ಲಿನ ಜಮಾಅತ್ ವ್ಯಾಪ್ತಿಯ ತೋಟಹೌಸ್‌ಗೆ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ಮಾಜಿ ಕಾರ್ಪೊರೇಟರ್ ಕೆ.ಇ. ಅಶ್ರಫ್ ಶುಕ್ರವಾರ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರವೂಫ್ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಅಬ್ದುಲ್ ನಾಸೀರ್ ಸಅದಿ ದುವಾ ನೆರವೇರಿಸಿದರು. ಬದ್ರಿಯಾ ಜುಮಾ ಮಸೀದಿ ಮಾಜಿ ಅಧ್ಯಕ್ಷ ಹಾಜಿ ಬಿ.ಎನ್ ಅಬ್ಬಾಸ್, ಉಪಾಧ್ಯಕ್ಷರಾದ ಹಾಜಿ ಎಚ್.ಎಸ್ ಹನೀಫ್, ಎಂ.ಎಚ್ ಮುಹಮ್ಮದ್ ಫೈಸಲ್ ನಗರ, ಸಂಚಾಲಕ ಬಿ.ಫಕ್ರುದ್ದೀನ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಹ್ಮದ್ ಬಾವ, ಬಿ.ಜೆ.ಎಂ ಮಾಜಿ ಕಾರ್ಯದರ್ಶಿ ಮೊಯ್ದೀನ್ ಕುಂಞಿ, ಮಾಜಿ ಸದಸ್ಯ ಅಬ್ದುಲ್ ಖಾದರ್ ಕೆಳಗಿನಮನೆ, ಕೋಶಾಧಿಕಾರಿ ಅಬ್ದುಲ್ ಸಲಾಂ, ಫೈಸಲ್ ನಗರ ಗೌಸಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್, ಶಾಂತಿನಗರ ತರ್ಬಿಯತುಲ್ ಇಸ್ಲಾಂ ಮಸೀದಿ ಅಧ್ಯಕ್ಷ ಇಕ್ಬಾಲ್, ಬಿ.ಜೆ.ಎಂ ಉಸ್ತುವಾರಿಗಳಾದ ನಝೀರ್ ಬಜಾಲ್, ಹಸನಬ್ಬ ಮೋನು, ಸದಸ್ಯರಾದ ತೋಟ ಅಶ್ರಫ್, ಜೊತೆ ಕಾರ್ಯದರ್ಶಿ ಅಬ್ದುಲ್ ರವೂಫ್ ಶಾಂತಿನಗರ, ಯೂಸುಫ್ ಶಾಂತಿನಗರ, ಹನೀಫ್ ಕೆಳಗಿನಮನೆ, ಇಕ್ಬಾಲ್ ಅಹ್ಸನಿ, ನಝೀರ್ ಪಾಂಡೇಲ್, ಅಬ್ಬಾಸ್ ಶಾಂತಿನಗರ, ಇಸ್ಮಾಯೀಲ್ ಫೈಸಲ್ ನಗರ, ಎನ್.ಎಸ್.ಆರ್ ನಾಸೀರ್, ಮೊಹಮ್ಮದ್ ರಫೀಕ್ ಫೈಸಲ್ ನಗರ, ಅಬ್ದುಲ್ ಸಲಾಂ ಫೈಸಲ್ ನಗರ ಮತ್ತಿತರರು ಉಪಸ್ಥಿತರಿದ್ದರು.
ಬಿ.ಜೆ.ಎಂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಸ್ವಾಗತಿಸಿ, ವಂದಿಸಿದರು.