
ಪಣೋಲಿಬೈಲು ಏ.8-15 ರವರೆಗೆ ಆಗೇಲು, ಕೋಲ ಸೇವೆ ಇಲ್ಲ
Monday, April 7, 2025
ಬಂಟ್ವಾಳ: ಸಜೀಪ ಮಾಗಣೆಗೊಳಪಟ್ಟ ಮಿತ್ತಮಜಲು ಕ್ಷೇತ್ರದಲ್ಲಿ ನಡೆಯುವ ವಿಷು ಜಾತ್ರೆಯ ಪ್ರಯುಕ್ತ ಸಜೀಪಮೂಡ ಗ್ರಾಮದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಎ.8 ರಿಂದ ಎ.15 ರವರೆಗೆ ಆಗೇಲು ಮತ್ತು ಕೋಲ ಸೇವೆ ನಡೆಯುವುದಿಲ್ಲ. ಎ.18 ರಿಂದ ಎಂದಿನಂತೆ ಸೇವೆಗಳು ಮುಂದುವರಿಯಲಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.