
ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ
Thursday, April 3, 2025
ಕಾರ್ಕಳ: ಮುನಿಯಾಲಿನ ಅಪ್ತಿ ಆಚಾರ್ಯ ಜಿಮ್ನಾಸ್ಟಿಕ್ ನ ಮಾದರಿಯಲ್ಲೊಂದಾದ ಹೆಡ್ರೋಲ್ ನಲ್ಲಿ ಗರಿಷ್ಠ 4 ನಿಮಿಷ 40 ಸೆಕೆಂಡ್ ನಲ್ಲಿ ಸತತ 65 ರೌಂಡ್ ಗಳನ್ನು ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾಳೆ.
ಮುನಿಯಲಿನ ಶಿವಾನಂದ ಆಚಾರ್ಯ ಮತ್ತು ಲತಾ ಆಚಾರ್ಯ ದಂಪತಿಯ ಪುತ್ರಿಯಾಗಿರುವ ಆಪ್ತಿ ಆಚಾರ್ಯ ಹೆಬ್ರಿಯ ಎಸ್.ಆರ್. ಪಬ್ಲಿಕ್ ಸ್ಕೂಲಿನ 4ನೇ ತರಗತಿಯ ವಿದ್ಯಾರ್ಥಿಯಾಗಿದ್ದು ಕಳೆದ ಎರಡು ವರ್ಷಗಳಿಂದ ಅವಿನಾಶ್ ಪೆರ್ಡೂರು ರ ವರಿಂದ ನೃತ್ಯ ಮತ್ತು ಜಿಮ್ನಾಸ್ಟಿಕ್ ತರಬೇತಿ ಪಡೆಯುತ್ತಿದ್ದಾಳೆ