ಕಲ್ಲಾಪುವಿನಿಂದ ಸಜಿಪ ವರೆಗೆ ನೇತ್ರಾವತಿ ನದಿ ತೀರದಲ್ಲಿ 160 ಕೋಟಿ ರೂ.ನ ಸಂಪರ್ಕ ರಸ್ತೆ ನಿರ್ಮಾಣ: ಯು.ಟಿ. ಖಾದರ್

ಕಲ್ಲಾಪುವಿನಿಂದ ಸಜಿಪ ವರೆಗೆ ನೇತ್ರಾವತಿ ನದಿ ತೀರದಲ್ಲಿ 160 ಕೋಟಿ ರೂ.ನ ಸಂಪರ್ಕ ರಸ್ತೆ ನಿರ್ಮಾಣ: ಯು.ಟಿ. ಖಾದರ್


ಮಂಗಳೂರು: ಕಲ್ಲಾಪುವಿನಿಂದ ಸಜಿಪದ ವರೆಗಿನ ನೇತ್ರಾವತಿ ನದಿ ತೀರದಲ್ಲಿ ಸುಮಾರು 160 ಕೋಟಿ ರೂ. ಯೋಜನೆಯ ಸಂಪರ್ಕ ರಸ್ತೆ ನಿರ್ಮಾಣ ಮಾಡಲು ಸರಕಾರ ಅನುಮೋದನೆ ನೀಡಿದೆ. ಈಗಾಗಲೇ 20 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕ್ಷೇತ್ರದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಇದೊಂದು ಮಹತ್ವದ ಯೋಜನೆಯಾಗಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಹೇಳಿದರು.

ಅವರು ಭಾನುವಾರ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಕಲ್ಲಾಪು, ರಾಣಿಪುರ, ಹರೇಕಳ ನದಿ ತೀರದ ರಸ್ತೆ ಅಭಿವೃದ್ಧಿಯಾದರೆ ಹರೇಕಳ ಕಿಂಡಿ ಅಣೆಕಟ್ಟುವರೆಗೆ ಸ್ಥಳೀಯ ಪರಿಸರದ ಜನತೆಗೆ ಹಾಗೂ ಸಂಪರ್ಕ ರಸ್ತೆಯಾಗಿ ಅನುಕೂಲವಾಗಲಿದೆ. ಈ ಸಂದರ್ಭದಲ್ಲಿ ಪಾವೂರು-ಉಳಿಯ ತೂಗುಸೇತುವೆ ನಿರ್ಮಾಣಕ್ಕೆ 12 ಕೋಟಿ ರೂ. ಬಿಡುಗಡೆಯಾಗಿದೆ. ಕೋಟೆಪುರ-ಬೋಳಾರ ಸೇತುವೆ ನಿರ್ಮಾಣಕ್ಕೆ 220 ಕೋಟಿ ರೂ. ಬಿಡುಗಡೆಯಾಗಿದೆ. ಸಣ್ಣ ನೀರಾವರಿ ಯೋಜನೆ ಸಚಿವರು ಹಾಗೂ ಮುಖ್ಯಮಂತ್ರಿಯ ಮೂಲಕ ಅನುಮತಿ ದೊರೆತು ಈಗಾಗಲೇ 40 ಕೋಟಿ ರೂ. ಬಿಡುಗಡೆಯಾಗಿದೆ ಎಂದು ತಿಳಿಸಿದ್ದಾರೆ. 

ಕರಾವಳಿಯ ಕಡಲ್ಕೊರೆತ ತಡೆಗೆ ಬಜೆಟ್‌ನಲ್ಲಿ ಒಟ್ಟು 200 ಕೋಟಿ ರೂ. ನಿಗದಿಪಡಿಸಲಾಗಿದೆ. ಈ ಪೈಕಿ ಉಳ್ಳಾಲ ಸೋಮೇಶ್ವರ ವ್ಯಾಪ್ತಿಯ ಕಡಲ್ಕೊರೆತ ಪೀಡಿತ ಪ್ರದೇಶಗಳಲ್ಲಿ ತಡೆಗೆ 70 ಕೋಟಿ ರೂ. ಅಂದಾಜು ಯೋಜನೆಯ ಪ್ರಸ್ತಾವವನ್ನು ರಾಜ್ಯ ಸರಕಾರಕ್ಕೆ ಅಧಿಕಾರಿಗಳ ಮೂಲಕ ಸಲ್ಲಿಸಲಾಗಿದೆ ಎಂದು ಹೇಳಿದರು.

ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿಗಾಗಿ ತಲಾ ಒಂದರಿಂದ ಒಂದೂವರೆ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಉಳ್ಳಾಲ ನಗರಸಭೆ ಮತ್ತು ಸೋಮೇಶ್ವರ ಪುರಸಭೆಯ ಅಭಿವೃದ್ಧಿ ಯೋಜನೆಗಳಿಗೆ ತಲಾ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಖಾದರ್ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article