18 ಶಾಸಕರ ಅಮಾನತು ರದ್ದತಿ ವಿಚಾರ: ಸದನದಲ್ಲಿ ಮಾತ್ರ ಮರು ಪರಿಶೀಲನೆಗೆ ಅವಕಾಶ

18 ಶಾಸಕರ ಅಮಾನತು ರದ್ದತಿ ವಿಚಾರ: ಸದನದಲ್ಲಿ ಮಾತ್ರ ಮರು ಪರಿಶೀಲನೆಗೆ ಅವಕಾಶ


ಮಂಗಳೂರು: ವಿಧಾನ ಸಭೆಯ ಕಲಾಪದ ಸಂದರ್ಭದಲ್ಲಿ 18 ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಿರುವ ಕ್ರಮದ ಬಗ್ಗೆ ಮರು ಪರಶೀಲನೆಗೆ ವಿಪಕ್ಷ ನಾಯಕರ ಮನವಿ ಬಂದಿದೆ. ಸಂವಿಧಾನದ ಪೀಠಕ್ಕೆ ಅಗೌರ ತೋರಿದ ಹಿನ್ನೆಲೆಯಲ್ಲಿ ಸದನದಲ್ಲಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಸದನದಲ್ಲಿ ಮಾತ್ರ ಮರು ಪರಿಶೀಲಿಸಿ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಯು.ಟಿ. ಖಾದರ್ ಹೇಳಿದರು.

ಭಾನುವಾರ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಕ್ರಮ ಕೈಗೊಳ್ಳಲು ಕೆಲವು ಶಾಸಕರು ದೂರು ನೀಡಿದ್ದಾರೆ. ಈ ಬಗ್ಗೆ ಪ್ರಿವಿಲೇಜ್ ಕಮಿಟಿಗೆ ಶಿಫಾರಸು ಮಾಡಲಾಗಿದೆ. ಶಾಸಕರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳಲು ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಸಮಿತಿ ತೀರ್ಮಾನಿಸಲಿದೆ. ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article