
ಪಹಲ್ಗಾಮ್ ಭಯೋತ್ಪಾದಕರ ಅಟ್ಟಹಾಸ ಭೀಕರ ಮತ್ತು ರಾಕ್ಷಸೀಯ ಕೃತ್ಯ: DYFI
ಮಂಗಳೂರು: ಕಾಶ್ಮೀರದಲ್ಲಿ ಭಯೋತ್ಪಾದಕರು ನಡೆಸಿದ ನರಮೇಧವನ್ನು ಖಂಡಿಸಿ, ಮತ್ತು ಕೇಂದ್ರ ಸರಕಾರದ ಸುರಕ್ಷಾ ವೈಫಲ್ಯವನ್ನು ಖಂಡಿಸಿ ಡಿವೈಎಫ್ಐ ಪಂಜಿಮೊಗರು ಘಟಕದ ವತಿಯಿಂದ ಕೂಳೂರು ಜಂಕ್ಷನ್ ನಲ್ಲಿ ಖಂಡನಾ ಸಭೆ ನಡೆಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಅವರು ಪ್ರಕರಣದ ಸಂಪೂರ್ಣ ಹೊಣೆಗಾರ ಆಗಿರುವ ಪ್ರಧಾನಿ ನರೇಂದ್ರ ಮೋದಿಯವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ನೋಟ್ ಬ್ಯಾನ್ ಮಾಡಿದಾಗ ಉಗ್ರವಾದದ ನಿರ್ಮೂಲನೆ ಸಬೂಬು ನೀಡಲಾಗಿತ್ತು, ಕಾಶ್ಮೀರದಲ್ಲಿ 370 ಕಲಂ ರದ್ದುಪಡಿಸಿದಾಗಲೂ ಭಯೋತ್ಪಾದನೆ ನಿರ್ಮೂಲನೆಗಾಗಿ ಎಂದು ಹೇಳಲಾಗಿತ್ತು.
ದೇಶ ಬಲಿಷ್ಠರ ಕೈಯಲ್ಲಿದೆ ಎನ್ನುವ ಮೋದಿಯವರ ಬೊಗಳೆ ಮಾತನ್ನು ನಂಬಿದ ಪ್ರವಾಸಿಗರು ಪ್ರಾಣ ಬಿಡಬೇಕಾಯಿತು. ಹೆಚ್ಚಿನ ಭಯೋತ್ಪಾದಕ ದಾಳಿಗಳು ಬಿಜೆಪಿ ಅಧಿಕಾರದಲ್ಲಿ ಇರುವಾಗಲೇ ನಡೆದಿದೆ. ಇಂಥ ಎಲ್ಲಾ ಸಂದರ್ಭದಲ್ಲಿ ಬಿಜೆಪಿಗರು ಮತೀಯ ದ್ವೇಷ ರಾಜಕಾರಣ ಶುರು ಮಾಡಿ ಮತ ಬೇಟೆಗೆ ಹೊರಡುತ್ತಾರೆ ಎಂದು ಆಪಾದಿಸಿದರು.
ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮಾತನಾಡಿ ಕಾಶ್ಮೀರದಲ್ಲಿ ನಡೆದ ಭೀಕರ ನಾಗರಿಕರ ಹತ್ಯೆಯನ್ನು ನಾವು ಖಂಢಿಸುತ್ತೇವೆ ಮತ್ತು ತಮ್ಮವರನ್ನು ಕಳೆದುಕೊಂಡವರ ಕುಟುಂಬಗಳಿಗೆ ಗರಿಷ್ಠ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.
ಪ್ರತಿ ಸಂಧರ್ಭದಲ್ಲಿ ಉಗ್ರರ ದಾಳಿಯನ್ನು ತಮ್ಮ ಸರಕಾರದ ವೈಫಲ್ಯ ಮರೆಮಾಚಲು ಮುಸ್ಲಿಂ ಸಮುದಾಯಕ್ಕೆ ತಲೆಗಟ್ಟುವ ಬಿಜೆಪಿಗರು ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿದ್ದಾರೆ. ಅತ್ಯಂತ ಹೆಚ್ಚು ಪ್ರವಾಸಿಗರ ಸೆಳೆಯುವ ಪಹಲ್ಗಾಮ್ ನಲ್ಲಿ ಭದ್ರತಾ ಪಡೆಗಳು ಇರಲಿಲ್ಲ ಎಂಬುವುದು ಪ್ರವಾಸಿಗರು ತಿಳಿಸಿದ್ದಾರೆ. ಇದು ಸುರಕ್ಷತೆ ವಿಚಾರದಲ್ಲಿ ಕೇಂದ್ರ ಸರಕಾರದ ಅತ್ಯಂತ ಬೇಜವಬ್ದಾರಿ ಎದ್ದು ಕಾಣುತ್ತಿದೆ. ಭಯೋತ್ಪಾದಕ ರಾಕ್ಷಸಿ ಕೃತ್ಯ ಸಂಧರ್ಭದಲ್ಲಿ ಸ್ಥಳೀಯರು ಪ್ರವಾಸಿಗರ ಕಾಪಾಡುವಲ್ಲಿ ಶ್ರಮ ವಹಿಸಿದ್ದಾರೆ, ಬಡ ಕುದುರೆ ಸವಾರ ಆದಿಲ್ ಉಗ್ರರ ಗುಂಡಿಗೆ ಎದೆಯೊಡ್ಡಿ ಹೋರಾಡಿ ಪ್ರಾಣತ್ತೆತ್ತು ಇಡೀ ಭಾರತೀಯರಿಗೆ ಸ್ಪೂರ್ತಿ ಆಗಿದ್ದಾರೆ.
ಪ್ರವಾಸಿಗರು ಹೆಚ್ಚಾಗಿ ಹೋಗಲು ಬಯಸುವ ಭೂಲೋಕದ ಸ್ವರ್ಗ ಕಾಶ್ಮೀರ ವು ಸೂಕ್ಷ್ಮ ಪ್ರದೇಶವಾಗಿದ್ದರೂ ಗುಪ್ತಚರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಕೇಂದ್ರದ ವೈಪಲ್ಯವನ್ನು ಮರೆಮಚಿಸುವ ಸಲುವಾಗಿ ದಾರ್ಮಿಕ ಕಲಹವಾಗಿ ಮಾರ್ಪಡಿಸುತ್ತಿದೆ ಎಂದು ಆಪಾದಿಸಿದರು.
ಖಂಡನಾ ಸಭೆಯಲ್ಲಿ ಡಿವೈಎಫ್‌ಐ ಜಿಲ್ಲಾ ಮುಖಂಡರಾದ ಶ್ರೀನಾಥ್ ಕಾಟಿಪಳ್ಳ, ಪ್ರದೀಪ್ ಉರ್ವಸ್ಟೋರ್, ಡಿಎಚ್ಎಸ್ ಮುಖಂಡರಾದ ಕೃಷ್ಣ ತಣ್ಣೀರು ಬಾವಿ, ಡಿವೈಎಫ್‌ಐ ಪಂಜಿಮೊಗರು ಘಟಕ ಅಧ್ಯಕ್ಷ ಚರಣ್ ಶೆಟ್ಟಿ, ಕಾರ್ಯದರ್ಶಿ ಸಂತೋಷ್ ಡಿಸೋಜ, ಹನುಮಂತ, ಸೌಮ್ಯ, ಸರಿತಾ, ಆಶಾ, ಸೋಮೇಶ, ಬಶೀರ್, ಕಲೀಲ್, ಅನಿಲ್ ಡಿಸೋಜ, ಅವಿಷ , ತ್ರಿಷಾ, ಡೆನ್ನಿಸ್ ಫೆರಾವೊ, ಕ್ಲಾಡಿ, ನೌಶಾದ್, ಮುಸ್ತಾಫ ಮುಂತಾದವರು ಭಾಗವಹಿಸಿದ್ದರು.