
ಕೊರಗಜ್ಜನಿಗೆ ಕೈಮುಗಿದು ಕಳವು
Wednesday, April 30, 2025
ಮಂಗಳೂರು: ಕೊರಗಜ್ಜ ದೈವದೆದುರು ಕೈಮುಗಿದ ಕಳ್ಳನೊಬ್ಬ ಕಾಣಿಕೆ ಹುಂಡಿಯನ್ನು ಹೊತ್ತೊಯ್ದ ಘಟನೆ ಹೊರವಲಯದ ಏರ್ ಪೋರ್ಟ್ ರಸ್ತೆಯಲ್ಲಿನ ಕೊರಗಜ್ಜನ ಕಟ್ಟೆಯಲ್ಲಿ ನಡೆದಿದ್ದು, ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ಎ.29ರ ಮಂಗಳವಾರ 5.30ರ ಸುಮಾರಿಗೆ ವಾಹನಗಳು ರಸ್ತೆಯಲ್ಲಿ ಓಡಾಡುತ್ತಿರುವಂತೆಯೇ ಕಳ್ಳನೊಬ್ಬ ಕೊರಗಜ್ಜನ ಕಟ್ಟೆಗೆ ಬಂದಿದ್ದಾನೆ.
ದೈವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ಭಕ್ತಿಯಿಂದ ಕೈಮುಗಿದ ಕಳ್ಳ ಕೊನೆಗೆ ಅಲ್ಲಿದ್ದ ಕಾಣಿಕೆ ಹುಂಡಿಯನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಕಳ್ಳನ ಕೃತ್ಯ ಸಿಸಿ ಕೆಮರಾದಲ್ಲಿ ದಾಖಲಾಗಿದೆ.