‘ಕಸ ಪ್ರಸಂಗ: ಕಸ ನಿರ್ವಹಣೆ’ ಕಾರ್ಯಗಾರ

‘ಕಸ ಪ್ರಸಂಗ: ಕಸ ನಿರ್ವಹಣೆ’ ಕಾರ್ಯಗಾರ


ಮಂಗಳೂರು: ಇಲ್ಲಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ದಶಮಾನೋತ್ಸವದ ಅಂಗವಾಗಿ ಕಾಲೇಜಿನ ಎನ್‌ಎಸ್‌ಎಸ್ ಹಾಗೂ ಐಕ್ಯೂಏಸಿ ಸಹಯೋಗದಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗಾಗಿ ‘ಕಸ ಪ್ರಸಂಗ: ಕಸ ನಿರ್ವಹಣೆ’ ಕುರಿತು ಮಾಹಿತಿ ಕಾರ್ಯಾಗಾರ ಏ.8 ರಂದು ನಡೆಯಿತು.


ಸಂಪನ್ಮೂಲ ವ್ಯಕ್ತಿಯಾಗಿ ಹಸಿರು ದಳ ಮಂಗಳೂರು ಇದರ ವ್ಯವಸ್ಥಾಪಕ ನಾಗರಾಜ್ ಆರ್. ಅಂಚನ್ ಭಾಗವಹಿಸಿ ಮಾತನಾಡಿ, ‘ಕಸ ನಿರ್ವಹಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾದುದು. ನಿರ್ವಹಣೆಗಿಂತ ಬಳಕೆಯಲ್ಲಿ ಬದಲಾವಣೆ ಅಗತ್ಯ. ಪ್ಲಾಸ್ಟಿಕ್ ಮತ್ತಿತರ ಹಾನಿಕಾರಕ ವಸ್ತುಗಳ ಬದಲು ಸಾಂಪ್ರದಾಯಿಕ ವಸ್ತುಗಳನ್ನು ಬಳಸಬಹುದು ಎಂಬ ಸಲಹೆಗಳನ್ನು ನೀಡಿದರು.


ಐಕ್ಯೂಏಸಿ ಸಂಯೋಜಕ ದೇವಿಪ್ರಸಾದ್, ಎನ್‌ಎಸ್‌ಎಸ್ ಸಂಯೋಜಕರುಗಳಾದ ಡಾ. ಲೋಕೇಶ್‌ನಾಥ್, ಡಾ. ಮೋಹನ ದಾಸ್, ಶಾಂತಿ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಧೀರಜ್ ಕುಮಾರ್, ಕಾರ್ಯದರ್ಶಿ ತುಷಾರ್ ಕೆ. ಅವರು ಉಪಸ್ಥಿತರಿದ್ದರು. 


ಹಿರಿಯ ವಿದ್ಯಾರ್ಥಿ ಪ್ರಜ್ವಲ್ ಅವರು ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಸುಮಾರು 80 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article