ಕುಡುಪು ಪ್ರಕರಣದಲ್ಲಿ ಬಂಧನ-ರಾಜಕೀಯ ಪ್ರೇರಿತ, ಸುಳ್ಳು ಕೇಸಿನಲ್ಲಿ ಸಿಲುಕಿಸಲು ಯತ್ನ: ಡಾ. ಭರತ್ ಶೆಟ್ಟಿ ವೈ. ಕಿಡಿ

ಕುಡುಪು ಪ್ರಕರಣದಲ್ಲಿ ಬಂಧನ-ರಾಜಕೀಯ ಪ್ರೇರಿತ, ಸುಳ್ಳು ಕೇಸಿನಲ್ಲಿ ಸಿಲುಕಿಸಲು ಯತ್ನ: ಡಾ. ಭರತ್ ಶೆಟ್ಟಿ ವೈ. ಕಿಡಿ


ಮಂಗಳೂರು: ಕುಡುಪು ಬಳಿ ದೇಶ ವಿರೋಧಿ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಯುವಕರನ್ನು ಈ ಕೇಸಿನಲ್ಲಿ ಸಿಲುಕಿಸಲು ಪ್ರಯತ್ನಿಸಲಾಗುತ್ತಿದೆ. ಮಾತ್ರವಲ್ಲ ರಾಜಕೀಯ ಒತ್ತಡವೂ ಪೊಲೀಸರ ಮೇಲೆ ಹಾಕಲಾಗುತ್ತಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ. ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ತನಿಖೆ ಮಾಡುವ ನೆಪದಲ್ಲಿ ಎಳೆದುಕೊಂಡು ಹೋಗಿ ಪ್ರಕರಣವನ್ನು ಬಲವಂತ ವಾಗಿ ಒಪ್ಪಿಕೊಳ್ಳುವಂತೆ ಬೆದರಿಸಲಾಗುತ್ತಿದೆ. ಇದೀಗ ಕೆಲವು ಸಂಘಟನೆಗಳು, ಪಕ್ಷಗಳು  ಪ್ರತಿಭಟನೆ ಮಾಡುವುದರ ಹಿಂದೆ ರಾಜಕೀಯ ತಂತ್ರವಿದ್ದು, ಪೊಲೀಸ್ ಇಲಾಖೆ ಆಡಳಿತ ಪಕ್ಷದ ರಾಜಕೀಯ ಕೈಗೊಂಬೆಯಂತೆ ವರ್ತಿಸುತ್ತಿದೆ. ವಿನಾಃ ಕಾರಣ ಹಿಂದೂ ಯುವಕರನ್ನು ಸುಳ್ಳು ಕೇಸಿನಲ್ಲಿ ಸಿಲುಕಿಸಲು ಪ್ರಯತ್ನ ನಡೆಯುತ್ತಿದ್ದು, ಪೊಲೀಸ್ ಠಾಣೆಗೆ ಘೆರಾವ್ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ರಾಜ್ಯದ ಕಾಂಗ್ರೆಸ್ ಆಡಳಿತದಲ್ಲಿ ದೇಶದ್ರೋಹಿಗಳಿಗೆ ರಾಜಮರ್ಯಾದೆ ದೊರಕುತ್ತಿದೆ. ದೇಶ ಪ್ರೇಮಿಗಳನ್ನು ಇಂದು ಅಪರಾಧಿಗಳಂತೆ ಕಂಡು ಅವರ ಮೇಲೆ ಸುಳ್ಳು ಕೇಸು ದಾಖಲಿಸಿ ಬೆದರಿಕೆ ತಂತ್ರ ಅನುಸರಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article