ಏ.28 ರಂದು ಮೂಡುಬಿದಿರೆ ತಾಲೂಕು ಅಭಿವೃದ್ಧಿಗಾಗಿ ಸಿಪಿಐ(ಎಂ)ನಿಂದ ಹಕ್ಕೊತ್ತಾಯ

ಏ.28 ರಂದು ಮೂಡುಬಿದಿರೆ ತಾಲೂಕು ಅಭಿವೃದ್ಧಿಗಾಗಿ ಸಿಪಿಐ(ಎಂ)ನಿಂದ ಹಕ್ಕೊತ್ತಾಯ


ಮೂಡುಬಿದಿರೆ: ತಾಲೂಕಾಗಿ ಪರಿವತ೯ನೆಗೊಂಡಿರುವ ಮೂಡುಬಿದಿರೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಯ೯ಗಳು ಆಗದೆ  ಹಾಗೆಯೇ ಬಾಕಿ ಉಳಿದಿದ್ದು ಅವುಗಳನ್ನು ಆದಷ್ಟು ಬೇಗ ಈಡೇರಿಸುವಂತೆ ಆಗ್ರಹಿಸಿ ಸಿಪಿಐ(ಎಂ) ಪಕ್ಷದಿಂದ ಏ. 28ರಂದು ಬೆಳಿಗ್ಗೆ 10.00ಕ್ಕೆ ಮಿನಿ ವಿಧಾನ ಸೌಧದ ಮುಂಭಾಗ ಧರಣಿ ಸತ್ಯಾಗ್ರಹ ದೊಂದಿಗೆ ಹಕ್ಕೊತ್ತಾಯ ನಡೆಯಲಿದೆ ಎಂದು ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾಯ೯ದಶಿ೯ ಯಾದವ ಶೆಟ್ಟಿ ಹೇಳಿದರು.

ಅವರು ಸೋಮವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸಾವಿರಾರು ಕುಟುಂಬಗಳಿಗೆ ಸ್ವಂತ ಜಮೀನು ಇಲ್ಲದೆ ಮನೆ ಇಲ್ಲದಂತ್ತಾಗಿದೆ ಅಂತವರಿಗೆ ನಿವೇಶನ ಮತ್ತು ವಸತಿ ನೀಡಬೇಕು., ಸರಕಾರಿ ಆಸ್ಪತ್ರೆಗೆ 100 ಬೆಡ್ಡುಗಳ ವ್ಯವಸ್ಥೆ, ತಜ್ಞ ವೈದ್ಯರು, ಆರೋಗ್ಯ ಯಂತ್ರೋಪಕರಣ, 24 ಗಂಟೆಯೂ ವೈದ್ಯರು ಲಭ್ಯವಿರಬೇಕು., ಮೂಲಭೂತ ಸೌಕಯ೯ಗಳೊಂದಿಗೆ ಸರಕಾರಿ ಪದವಿ ಕಾಲೇಜು, ಸರಕಾರಿ ಐಟಿಐ ಮತ್ತು ತಾಂತ್ರಿಕ ಕಾಲೇಜು, ಗ್ರಾಮೀಣ ಪ್ರದೇಶಕ್ಕೂ ಸರಕಾರಿ ಬಸ್ಸು ಲಭ್ಯವಾಗಬೇಕು, ಖಾಸಗಿ ಬಸ್  ನಿಲ್ದಾಣದಲ್ಲಿ ಸರಕಾರಿ ಬಸ್ಸುಗಳು ನಿಲ್ಲಲು ವ್ಯವಸ್ಥೆ ಆಗಬೇಕು.

ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕು ಮತ್ತು ಸಾಕಷ್ಟು ಪ್ರಮಾಣದಲ್ಲಿ ಅಧ್ಯಾಪಕರನ್ನು ನೇಮಿಸಬೇಕು., ಪರಿಶಿಷ್ಟ ಜಾತಿ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಹಣ ಕಾದಿರಿಸಬೇಕು, ಕೊರಗ ಸಮುದಾಯ ವಾಸ್ತವ್ಯ ವಿರುವ ಪ್ರದೇಶವನ್ನು ಅಭಿವೃದ್ಧಿ ಪಡಿಸಬೇಕು. ಅವರ ಜಮೀನಿನ ದಾಖಲೆ ಪತ್ರವನ್ನು ಸಮಪ೯ಕಗೊಳಿಸಿ ಅವರಿಗೆ ವಸತಿ ವ್ಯವಸ್ಥೆ ಆಗಬೇಕು. 

ಕಟ್ಟಡ ಕಾಮಿ೯ಕರ ಕಾನೂನು ಬದ್ಧ ಸೌಲಭ್ಯಗಳನ್ನು ರಕ್ಷಿಸಬೇಕು. ಅವರಿಗೆ ನೀಡಬೇಕಾದ ನ್ಯಾಯೋಚಿತ ಸೌಲಭ್ಯಗಳನ್ನು ಒದಗಿಸಬೇಕು. ಬೀಡಿ ಕಾಮಿ೯ಕರ ಕನಿಷ್ಠ ಕೂಲಿ ಪರಿಷ್ಕರಣೆ ಆಗಬೇಕು. ಬಾಕಿ ಇರುವ ತುಟ್ಟಿಭತ್ತೆ ಸೌಲಭ್ಯ ಅವರಿಗೆ ನೀಡಬೇಕು ಸಹಿತ 18 ಬೇಡಿಕೆಗಳ ಹಕ್ಕೊತ್ತಾಯ ನಡೆಯಲಿದೆ ಎಂದರು. 

ಸಿಪಿ(ಐ)ಎಂ.ನ ಜಿಲ್ಲಾ ಕಾಯ೯ದಶಿ೯ ಮಂಡಳಿ ಸದಸ್ಯ ವಸಂತ ಆಚಾರಿ, ಮುಖಂಡರಾದ ರಮಣಿ, ರಾಧಾ, ಲಕ್ಷ್ಮೀ, ಗಿರಿಜಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article