
ಜೆಇಇ ಫಲಿತಾಂಶ: ಆಳ್ವಾಸ್ ಪದವಿಪೂರ್ವ ವಿದ್ಯಾರ್ಥಿಗಳ ಸಾಧನೆ-63 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಪರ್ಸಂಟೈಲ್
Monday, April 21, 2025
ಮೂಡುಬಿದಿರೆ: ಜೆಇಇ ಫಲಿತಾಂಶ ಪ್ರಕಟವಾಗಿದ್ದು, ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿಯು ಅತ್ಯುತ್ತಮ ಸಾಧನೆ ಮೆರೆದಿದ್ದಾರೆ.
63 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ 99 ಪರ್ಸಂಟೈಲ್‌ಕ್ಕಿಂತ ಅಧಿಕ ಅಂಕ ಪಡೆದ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಬೌತಶಾಸ್ತçದಲ್ಲಿ 21, ರಸಾಯನಶಾಸ್ತçದಲ್ಲಿ 30 ಹಾಗೂ ಗಣಿತದಲ್ಲಿ 12 ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ.
99 ಪರ್ಸಂಟೈಲ್‌ಕ್ಕಿAತ ಅಧಿಕ 4 ವಿದ್ಯಾರ್ಥಿಗಳು, 98 ಪರ್ಸಂಟೈಲ್‌ಕ್ಕಿAತ ಅಧಿಕ 14 ವಿದ್ಯಾರ್ಥಿಗಳು, 97 ಪರ್ಸಂಟೈಲ್‌ಕ್ಕಿAತ 45 ವಿದ್ಯಾರ್ಥಿಗಳು, 95 ಪರ್ಸಂಟೈಲ್‌ಕ್ಕಿAತ 91 ವಿದ್ಯಾರ್ಥಿಗಳು, 90 ಪರ್ಸಂಟೈಲ್‌ಕ್ಕಿAತ ಅಧಿಕ 192 ವಿದ್ಯಾರ್ಥಿಗಳು ಅಂಕವನ್ನು ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳಾದ ಪುನೀತ ಕುಮಾರ್ ಬಿಜಿ (99.6925846), ಅಕ್ಷಯ ಎಂ ಹೆಗ್ಡೆ (99.5880183), ತುಷಾರ್ ಘನಶ್ಯಾಮ್ ಪಾಟೀಲ್ (99.3840016), ರೋಶನ್ ಶೆಟ್ಟಿ (99.048868), ಧನುಷ್ ಗೌಡ ಸಿಎಸ್(98.7585316), ಬಾಬು ಸಿದ್ದಲಿಂಗಪ್ಪ ಗೌರಿ (98.7523711), ಸಂಪದ ಜೆ (98.71897), ಪಾಂಡುರAಗ ಜಿವಿ(98.6255712), ತನೀಷ್ ಎನ್ ರಾಜ್ (98.2069216), ಭಾನು ಹರ್ಷ ಎಎನ್(98.1757193), ಸಾಗರ ಶರ್ಮ ಎಂ (98.1592698), ವಿಜೇತ್ ಜಿ ಗೌಡ (98.1097284), ಸಂದೇಶ ವಿಆರ್ (98.1049353), ವಿಸ್ಮಯ ಭಾರಧ್ವಾಜ್ (98.0442831) ಪರ್ಸಂಟೈಲ್ ಗಳಿಸಿದ್ದಾರೆ.
ಅಖಿಲ ಭಾರತ ಮಟ್ಟ ಕೆಟಗರಿ ವಿಭಾಗದಲ್ಲಿ ಲಿಖಾ ತಡಪ್ (435), ಸಂಪದ ಜೆ (497), ಆಕಾಶ್ ಪೂಜಾರ್ (895), ವಿಕ್ರಂ (890), ಪುನೀತ್ ಬಿಜಿ(980), ವೈಶಾಲಿ (1086), ಶ್ರವಣ್ ಎಸ್ ಚೌಟ (1336), ಪ್ರೇಕ್ಷಾ ಎಂಎಸ್ (1365), ರೋಷನ್ ಶೆಟ್ಟಿ(1937), ತುಷಾರ್ ಘನಶ್ಯಾಮ ಪಾಟೀಲ್ (2142), ಚೇತನ್ ಪ್ರಕಾಶ್ ಅಂಚನಾಳ್ (2156), ಭೂಮಿಕಾ ಎಂ (2159), ಪ್ರೇಮ ಕುಮಾರ್ ಎಸ್ (2428), ಸುಮಿತ್ ಬನಸೊದೆ (2530), ಕೆಎಲ್ ತೇಜಸ್ (2701), ಧನಂಜಯ ಎ (2710), ದೇವರಾಜ್ ರಾಮಚಂದ್ರ (2829), ಗಂಗಾಧರ ಎಸ್ (3153), ಸಾವಿತ್ರಿ ಕರಂತ್(3527), ಪವನ್ ಎ(3991), ಮಂಜುನಾಥ ಗೌಡ ಬಿಎಮ್ (4246), ವಿಕಾಸ ದೊಡ್ಡಮನಿ (4514), ಧನುಷ್ ಗೌಡ ಸಿಎಸ್ (4760) ರ‍್ಯಾಂಕ್ ಪಡೆದಿದ್ದಾರೆ.
ಆಳ್ವಾಸ್ ಸಂಸ್ಥೆಯ 383 ವಿದ್ಯಾರ್ಥಿಗಳು ಮುಂದೆ ನಡೆಯುವ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.