
ಸಾಮಾಜಿಕ ಜಾಲತಾಣದಲ್ಲಿ ತಲವಾರು ಪ್ರದರ್ಶನ: ಇಬ್ಬರ ಬಂಧನ
Thursday, April 10, 2025
ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ತಲವಾರನ್ನು ಪ್ರದರ್ಶಿಸಿ, ವೀಡಿಯೋ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳುನ್ನು ಪುತ್ತೂರಿನ ನಿವಾಸಿಗಳಾದ ಸುಜಿತ್ (36) ಮತ್ತು ಪುಟ್ಟಣ್ಣ (32) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಕಾನೂನಿಗೆ ಧಕ್ಕೆ ತರುವಂತೆ ಮಾರಕಾಯುಧವಾದ ತಲವಾರನ್ನು ಪ್ರದರ್ಶಿಸಿ, ಅದರ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದರು. ಇವರುಗಳ ವಿರುದ್ಧ ಏ.9 ರಂದು ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.