
ಜನಿವಾರ ಮುಟ್ಟಿದರೆ ಜಾಗ್ರತೆ
ಪುತ್ತೂರು: ದೇಶದ ಸಂಸ್ಕಾರ ಸಂಸ್ಕೃತಿ ಆಚಾರ ವಿಚಾರವನ್ನು ಉಳಿಸುವಲ್ಲಿ ಬ್ರಾಹ್ಮಣ ಸಮಾಜದ ಕೊಡುಗೆ ಇದೆ. ಇಂತಹ ಸಮಾಜದ ವಿದ್ಯಾರ್ಥಿಯೊಬ್ಬನ ಜನಿವಾರವನ್ನು ಪರೀಕ್ಷೆಯ ನೆಪದಲ್ಲಿ ತೆಗೆದಿರುವುದು ವಿವಾದಕ್ಕೆ ಕಾರಣವಾಗಿದೆ. ಜನಿವಾರವನ್ನು ಮುಟ್ಟುವ ಯಾವುದೇ ಅಧಿಕಾರ ಯಾರಿಗೂ ಇಲ್ಲ. ಯಾವುದೇ ಅಧಿಕಾರಿಯಾದರೂ ಜನಿವಾರವನ್ನು ಮುಟ್ಟಿದರೆ ಜಾಗ್ರತೆ ಎಂದು ಶಾಸಕ ಅಶೋಕ್ ರೈ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಮಾದ್ಯಮದೊಂದಿಗೆ ಮಾತನಾಡಿದ ಅವರು ಜನಿವಾರಕ್ಕೆ ಕೈ ಹಾಕಿದ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆ ಅಧಿಕಾರಿ ವಿರುದ್ಧ ರಾಜ್ಯ ಸರ್ಕಾರ ಸೂಕ್ತಕ್ರಮ ಕೈಗೊಳ್ಳಲಿದೆ. ಸಿಇಟಿ ಪರೀಕ್ಷೆ ಬರೆಯುವ ಯಾವುದೇ ವಿದ್ಯಾರ್ಥಿಗೂ ಯಾವುದೇ ಅಧಿಕಾರಿಯೂ ಈ ರೀತಿಯ ತೊಂದರೆ ಮಾಡಲು ಬಿಡುವುದಿಲ್ಲ. ಜನಿವಾರ ಧರಿಸುವುದು ಒಂದು ಸಂಸ್ಕಾರ. ಯಾವುದೇ ಸಮಾಜದ ನಂಬಿಕೆಗಳನ್ನು ಪ್ರಶ್ನಿಸುವಂತಿಲ್ಲ. ಆ ನಂಬಿಕೆ ಸಂಸ್ಕೃತಿಗೆ ಕೈ ಹಾಕುವುದು ಅಪರಾಧವಾಗುತ್ತದೆ. ಸರ್ಕಾರ ನಿಮ್ಮ ಬೆನ್ನ ಹಿಂದೆ ನಿಲ್ಲುತ್ತದೆ. ಬ್ರಾಹ್ಮಣ ಸಮಾಜದ ಜತೆಗೆ ನಮ್ಮ ಸರ್ಕಾರ ಇದೆ ಎಂದು ಅವರು ಹೇಳಿದರು.