
ಪೀಡಿಯಾಕಾನ್-2025 ಪ್ರಾದೇಶಿಕ ಸಮ್ಮೇಳನ
ಬಂಟ್ವಾಳ: ಮಂಗಳೂರು ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್ ಅಧೀನದಲ್ಲಿರುವ ತುಂಬೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ವತಿಯಿಂದ ಸ್ವಿಫ್ಟ್ ಹ್ಯಾಂಡ್ಸ್-ಸೇಫ್‌ಗಾರ್ಡಿಂಗ್ ಲಿಟಲ್ ಲೈವ್ಸ್ ಎಂಬ ಧ್ಯೇಯದಡಿ ಪೀಡಿಯಾಕಾನ್-2025 ಪ್ರಾದೇಶಿಕ ಸಮ್ಮೇಳನ ಕಾಲೇಜಿನ ಫ್ಲೋರೆನ್ಸ್ ನೈಂಟಿಗೇಲ್ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಫಾದರ್ ಮುಲ್ಲರ್ ಹೆಲ್ತ್ ಕೇರ್ ಸಿಮ್ಯುಲೇಶನ್ ಎಜ್ಯುಕೇಶನ್‌ನ ಮುಖ್ಯಸ್ಥ ಡಾ. ಲುಲು ಶರೀಫ್ ಮಹ್ಮೂದ್ ಅವರು, ಗರ್ಭಾಶಯದಿಂದ ನವಜಾತ ಶಿಶುವಿನವರೆಗಿನ ಸೂಕ್ಷ್ಮ ಆರೈಕೆಯ ಕುರಿತು ವಿವರಿಸಿದರು.
ಮಂಗಳೂರು ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಶನ್ಸ್‌ನ ನಿರ್ದೇಶಕ ರೆ. ಫಾ. ರಿಚ್ಚಾರ್ಡ್ ಅಲೋಶಿಯಸ್ ಕುವೆಲ್ಲೊ ಮಾತನಾಡಿ, ತುರ್ತು ಸಂದರ್ಭಗಳಲ್ಲಿ ಮಕ್ಕಳ ಆರೈಕೆ, ಆರೋಗ್ಯದ ಸಮಯೋಚಿತ ನಿರ್ವಹಣೆ ಅತಿ ಅಗತ್ಯವಾಗಿದೆ ಎಂದರು.
ಮಂಗಳೂರು ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಶನ್ಸ್‌ನ ನಿಯೋಜಿತ ನಿರ್ದೇಶಕ ರೆ. ಫಾ. ಪಾವೋಸ್ತಿನ್ ಲುಕಾಸ್ ಲೋಬೊ, ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ, ವೈದ್ಯಕೀಯ ಅಧೀಕ್ಷಕ ಡಾ. ಕಿರಣ್ ಶೆಟ್ಟಿ, ಆಯೋಜನಾ ಸಮಿತಿ ಕಾರ್ಯದರ್ಶಿ ಜಾಯ್ಸ್ ಫೆನಾಂಡೀಸ್ ಉಪಸ್ಥಿತರಿದ್ದರು.
ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಸಿ. ಜೂಡಿ ಸ್ವಾಗತಿಸಿದರು. ಆಯೋಜನಾ ಸಮಿತಿಯ ಜಾನೆಟ್ ಸಿಕ್ವೇರಾ ವಂದಿಸಿದರು. ಸಹ ಪ್ರಾಧ್ಯಾಪಕಿ ಡಾ. ಎಡ್ವಿನಾ ಫಿಲಿಪ್ ಮೊನಿಸ್ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಪ್ರಿನ್ಸಿಟಾ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಕಾಲೇಜುಗಳ ಒಟ್ಟು 211 ಮಂದಿ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.