
ವಿವಿಧ ಅಭಿವೃದ್ಧಿ ಕಾಮಗಾರಿಗೆ 2.50 ಕೋಟಿ ರೂ ಅನುದಾನ: ಸ್ಪೀಕರ್ ಖಾದರ್
ಬಂಟ್ವಾಳ: ಪುದು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಗ್ರಾಮಪಂಚಾಯತ್ ಸದಸ್ಯರ ಬೇಡಿಕೆಯನ್ನಯ 2.50 ಕೋಟಿ ರೂ ಅನುದಾನ ಒದಗಿಸಿದ್ದು, ಸಮರ್ಪಕವಾಗಿ ಬಳಸಿಕೊಂಡು ಆದ್ಯತೆಯ ಮೇಲೆ ಕಾಮಗಾರಿಗಳನ್ನು ಮಾಡುವಂತೆ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ಪುದು ಗ್ರಾ.ಪಂ. ವ್ಯಾಪ್ತಿಯ ಅಮ್ಮೆಮಾರ್ ಎಂಬಲ್ಲಿರುವ ದ.ಕ.ಜಿ.ಪಂ.ಹಿ. ಪ್ರಾಥಮಿಕ ಶಾಲೆಯ 36 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡದ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಜನವಸತಿ ಹೆಚ್ಚಿರುವ ಕಾರಣ ಇಲ್ಲಿಗೆ ಹೆಚ್ಚಿನ ಮೂಲಭೂತವಾದ ಸೌಕರ್ಯಗಳನ್ನು ಒದಗಿಸಲಾಗಿದೆ. ಹಿರಿಯರು ಆರಂಭಿಸಿರುವ ಶಾಲೆಯ ಅಭಿವೃದ್ಧಿಗಾಗಿ ಎರಡು ಕೊಠಡಿ ನಿರ್ಮಾಣಕ್ಕೆ 36 ಲಕ್ಷ ಹಾಗೂ ಪೀಠೋಪಕರಣಕ್ಕೆ ಮೂರುವರೆ ಲಕ್ಷ ಒಟ್ಟು 39 ಲಕ್ಷ ಅನುದಾನ ಒದಗಿಸಲಾಗಿದೆ ಎಂದರು.
ಪುದುಗ್ರಾಮದ ಅಮ್ಮೆಮಾರ್‌ನಲ್ಲಿ ನೂತನ ಆರೋಗ್ಯ ಉಪಕೇಂದ್ರಕ್ಕೆ 65 ಲಕ್ಷ ಒದಗಿಸಲಾಗಿದೆ ಎಂದು ಅವರು ಅಮ್ಮೆಮಾರ್ ರೈಲ್ವೆ ಟ್ರ್ಯಾಕ್ ಸಮೀಪದ ರಸ್ತೆಗೆ ಕಾಂಕ್ರೀಟ್ ಕರಣ ಸಹಿತ ವಿವಿಧ ಬೇಡಿಕೆಯನ್ನು ಗಮನದಲ್ಲಿರಿಸಿಕೊಂಡು ಹಂತ, ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಜಿ.ಪಂ. ಮಾಜಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ, ಗ್ರಾ.ಪಂ. ಮಾಜಿ ಅಧ್ಯಕ್ಷ ರಮ್ಲಾನ್ ಮಾರಿಪಲ್ಲ, ಉಪಾಧ್ಯಕ್ಷ ಇಕ್ಬಾಲ್ ಸುಜೀರ್, ಗ್ರಾ.ಪಂ. ಸದಸ್ಯರಾದ ಇಸಾಂ ಫರಂಗಿಪೇಟೆ, ರಝಾಕ್ ಅಮ್ಮೆಮಾರ್, ಶಾರಾ ಅಮ್ಮೆಮಾರ್, ರುಕ್ಸಾನಾ ಅಮ್ಮೆಮಾರ್, ನಬೀಶಾ ಅಮ್ಮೆಮಾರ್, ಹಾತಿಕಾ ಅಮ್ಮೆಮಾರ್, ಶಾಲಾ ಅಭಿವೃದ್ಧಿ ಅಧ್ಯಕ್ಷರಾದ ಜುಬೈರ್ ಅಮ್ಮೆಮಾರ್, ಬದ್ರಿಯಾಮಸೀದಿ ಅಧ್ಯಕ್ಷರಾದ ಅಬುಸಾಲಿ ಉಸ್ತಾದ್, ಪ್ರಮುಖರಾದ ಅಕ್ತರ್ ಹುಸೈನ್, ಮಹಮ್ಮದ್ ಬುಖಾರಿ, ಎಫ್.ಎ. ಖಾದರ್, ಫಯಾಜ್ ಅಮ್ಮೆಮಾರ್, ಅಬುಸಾಲಿ ಕಲ್ಲಾಜೆ, ಫಾರೂಕ್ ಪುಂಚಮೆ, ಹರ್ಷದ್ ಪುಂಚಮೆ, ಶಾಲಾ ಮುಖ್ಯ ಶಿಕ್ಷಕಿ ಝರಿನಾ ಪೆರ್ನಾಂಡಿಸ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.