
ಅಕ್ಕಿಗೋಣಿಚೀಲ ತುಂಬಿದ್ದ ಲಾರಿ ಪಲ್ಟಿ, ಒರ್ವನ ಮೃತ್ಯು
ಬಂಟ್ವಾಳ: ಅಕ್ಕಿಗೋಣಿಚೀಲ ಹೇರಿಕೊಂಡು ಬರುತ್ತಿದ್ದ ಲಾರಿಯೊಂದು ಬಂಟ್ವಾಳ ಎಸ್‌ವಿಎಸ್ ಕಾಲೇಜ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕಾರ್ಮಿಕನೊರ್ವ ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಜಾರ್ಖಾಂಡ್ ಮೂಲದ ನಿರ್ಮಲಾ ಅನ್ಸಾ (32) ಮೃತಪಟ್ಟ ಕಾರ್ಮಿಕ ಎಂದು ಗುರುತಿಸಲಗಾಇದ್ದು, ಇನ್ನೋರ್ವ ಕಾರ್ಮಿಕ ಆದರ್ಶ ಎಂಬವರು ಗಾಯಗೊಂಡಿದ್ದು, ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾರಿ ಚಾಲಕ ಸುಜಿತ್ ಕ್ಲೀನರ್ ಸಿ. ಮೋಹನ್ ಮುರ್ಮ ಯಾವುದೇ ಗಾಯವಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದಾರೆ.
ಅಕ್ಕಿ ಲೋಡಿನ ಲಾರಿ ಬಂಟ್ವಾಳದ ಎಸ್‌ವಿಎಸ್ ಕಾಲೇಜು ಬಳಿ ಬರುವಾಗ ಅತಿಯಾದ ಮಳೆಗೆ ಚಾಲಕನ ನಿಯಂತ್ರಣ ಕಳೆದು ಪಲ್ಟಿಯಾಗಿದೆ. ಉಡುಪಿ ಕಡೆಯಿಂದ ಅಕ್ಕಿಯ ಗೋಣಿಚೀಲಗಳನ್ನು ಹೇರಿಕೊಂಡು ಮೂಡಬಿದ್ರೆಯಾಗಿ ಬಂಟ್ವಾಳದತ್ತ ಬರುತ್ತಿದ್ದಾಗ ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆಯೆನ್ನಲಾಗಿದ್ದು, ಪರಿಣಾಮ ಲಾರಿಯ ಹಿಂಬದಿಯಲ್ಲಿ ಕುಳಿತುಕೊಂಡಿದ್ದ ಕಾರ್ಮಿಕ ನಿರ್ಮಲಾ ರಸ್ತೆಗೆ ಎಸೆಯಲ್ಟಟ್ಟು ಮೃತಪಟ್ಟಿದ್ದಾನೆನ್ನಲಾಗಿದೆ. ಇವರ ಜೊತೆಗಿದ್ದ ಇನ್ನೊರ್ವ ಕಾರ್ಮಿಕ ಆದರ್ಶ್ ಗಂಭೀರಗಾಯಗೊಂಡಿದ್ದಾರೆ. ಲಾರಿಯ ನಾಲ್ಕು ಚಕ್ರಗಳು ಮೇಲ್ಮುಖವಾಗಿ ಬಿದ್ದಿದ್ದು, ಹಿಂಬದಿಯಲ್ಲಿದ್ದ ಕಾರ್ಮಿಕರಿಬ್ಬರು ಲಾರಿಯಡಿಯಲ್ಲಿ ಸಿಲುಕಿದ್ದರು. ಇವರಿಬ್ಬರನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು.
ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.