
ಮಕ್ಕಳ ಕಳ್ಳತನಕ್ಕೆ ಯತ್ನ: ಮಗುವಿನ ತಾಯಿಗೆ ಚೂರಿ ಇರಿದು ಪರಾರಿ
Friday, May 16, 2025
ಕಾಪು: ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಇಬ್ಬರು ಬುರ್ಖಾದಾರಿ ಮಹಿಳೆಯರು ಮಗುವಿನ ಕಳ್ಳತನಕ್ಕೆ ಯತ್ನಿಸಿದ್ದು, ಮಗುವಿನ ತಾಯಿಯ ಸಮಯ ಪ್ರಜ್ಞೆಯಿಂದ ಅಪಹರಣ ತಪ್ಪಿದೆ. ಇದೇ ಸಂದರ್ಭ ಮಗುವಿನ ತಾಯಿಗೆ ಚೂರಿ ಇರಿದು ಪರಾರಿ ಆದ ಘಟನೆ ಶುಕ್ರವಾರ ಮದ್ಯಾಹ್ನ ಸಂಭವಿಸಿದೆ.
ಬೆಳಪು ಜನತಾಕಾಲನಿಯ ಮೊಹಮ್ಮದ್ ಆಲಿ ಎಂಬುವರ ಮನೆಗೆ ಇಬ್ಬರು ಬುರ್ಖಾ ಧರಿಸಿದ ಮಹಿಳೆಯರು ಬಂದು ನನಗೆ ಶೌಚಾಲಯಕ್ಕೆ ಹೋಗಬೇಕು ಎಂದು ಹೇಳಿ ಒಬ್ಬ ಮಹಿಳೆ ಮನೆಯ ಒಳಗೆ ಪ್ರವೇಶಿಸಿದ್ದಾಳೆ. ಒಳಗೆ ತೊಟ್ಟಿಲಿನಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಹೊರಗೆ ಓಡಿ ಹೋಗಲು ಪ್ರಯತ್ನಿಸಿದಾಗ, ಮಗುವಿನ ತಾಯಿ ತಾಬುರಿಸ್ ತಡೆದಿದ್ದಾರೆ. ಆಕೆ ಬೊಬ್ಬೆ ಹೊಡೆದಾಗ ಮಗುವನ್ನು ನೆಲದಲ್ಲಿ ಬಿಟ್ಟು ತಡೆಯಲು ಬಂದ ತಬ್ಬಿರ್ಸ್ ಗೆ ಚೂರಿಯಿಂದ ಗಾಯಗೊಳಿಸಿ ಪರಾರಿಯಾಗಿದ್ದಾರೆ.
ಈ ಮಹಿಳೆಯರು ಬೆಳಪು ಆಸುಪಾಸಿನಲ್ಲಿರುವ ಶಂಶಯವಿದ್ದು, ಯಾರಿಗಾದರೂ ಮಹಿಳೆಯರು ಕಂಡು ಬಂದಲ್ಲಿ ತಕ್ಷಣ ಶಿರ್ವ ಠಾಣೆಗೆ 94805450ಗೆ ತಿಳಿಸಲು ಕೋರಲಾಗಿದೆ.
ಮಹಿಳೆಯ ಬುರ್ಕಾ ಬೆಳಪು ರೈಲ್ವೇ ಹಳಿಯ ಬಳಿ ಪತ್ತೆ ಆಗಿದೆ. ಶಿರ್ವ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.