
ಚೈತ್ರ ಕುಂದಾಪುರ ವಿರುದ್ಧ ತಂದೆ ಅಪಸ್ವರ
Thursday, May 15, 2025
ಕುಂದಾಪುರ: ನನ್ನ ಮಗಳು ಹಾಗೂ ಆಕೆಯ ಪ್ರಿಯಕರ ಇಬ್ಬರೂ ಕಳ್ಳರು. ಹೀಗೆಂದವರು ಚೈತ್ರ ಕುಂದಾಪುರ ತಂದೆ ಬಾಲಕೃಷ್ಣ ನಾಯ್ಕ್.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಂದೆಗೆ ಅನ್ನ ಹಾಕದವಳು ಏನು ದೇಶ ಸೇವೆ ಮಾಡಿಯಾಳು ಎಂದು ಪ್ರಶ್ನಿಸಿದರು. ತನ್ನ ಹಿರಿಮಗಳು ಒಳ್ಳೆಯವಳು. ಆಕೆ ಶಿಕ್ಷಕಿ, ಟೈಲರಿಂಗ್ ಮಾಡಿ ನಮ್ಮ ಮನೆತನದ ಗೌರವ ಉಳಿಸಲು ಶ್ರಮಿಸುತ್ತಿದ್ದಾಳೆ. ಆದರೆ, ಚೈತ್ರ ರಾಷ್ಟ್ರಕ್ಕೇ ಮಾರಕ. ಗೋವಿಂದ ಪೂಜಾರಿ ಬಳಿ ಕೋಟ್ಯಂತರ ಹಣ ಪಡೆದಿದ್ದಾಳೆ. ಆಕೆಯ ತಾಯಿ ಹಣದ ಆಸೆಯಿಂದ ಅವಳ ಪರ ಇದ್ದಾಳೆ.
ಚೈತ್ರ ಪ್ರಿಯಕರ ಶ್ರೀಕಾಂತ ಕಶ್ಯಪ್ ಕೂಡಾ ಸರಿ ಇಲ್ಲ. ಅವರಿಬ್ಬರ ಮದುವೆಯನ್ನು ನಾನು ಒಪ್ಪುವುದಿಲ್ಲ ಎಂದು ಆರೋಪಿಸಿದರು.
ತಂದೆಯ ಆರೋಪಕ್ಕೆ ಪ್ರತಿಯಾಗಿ ಚೈತ್ರ ಕುಂದಾಪುರ, ’ನನ್ನ ತಂದೆ ಕುಡುಕ. ಮನೆ, ಮಕ್ಕಳ ಬಗ್ಗೆ ಪ್ರೀತಿ ತೋರದ ಬೇಜವಾಬ್ದಾರಿ ಮನುಷ್ಯ’ ಎಂದು ಕಿಡಿಕಾರಿದ್ದಾಳೆ.
ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.