ಲಾರಿಗಳ ಅಪಘಾತ-ಡಾಮರ್ ಮೈಮೇಲೆ ಬಿದ್ದು ಚಾಲಕ ಸಾವು

ಲಾರಿಗಳ ಅಪಘಾತ-ಡಾಮರ್ ಮೈಮೇಲೆ ಬಿದ್ದು ಚಾಲಕ ಸಾವು

ಬಂಟ್ವಾಳ: ಲಾರಿಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಲಾರಿಯಲ್ಲಿದ್ದ ಬಿಸಿ ಜಲ್ಲಿ ಮಿಶ್ರಿತ ಡಾಮರು ಮೈಮೇಲೆ ಬಿದ್ದು ಲಾರಿ ಚಾಲಕ ಮೃತಪಟ್ಟ ಹೃದಯವಿದ್ರಾವಕ ಘಟನೆ ಬಂಟ್ವಾಳ ಸಜೀಪದಲ್ಲಿ ಇಂದು ನಡೆದಿದೆ. ಸಜೀಪನಡು ಗೋಳಿಪಡ್ಪು ನಿವಾಸಿ ರಫೀಕ್ (45) ಮೃತ ದುರ್ದೈವಿ.

ಕಂಚಿನಡ್ಕಪದವು ಕಡೆಯಿಂದ ಸಜೀಪನಡು ಹೋಗುತ್ತಿದ್ದ ವೇಳೆ ಕಂಚಿನಡ್ಕಪದವು ಎಂಬಲ್ಲಿ ಕೆಂಪು ಕಲ್ಲುಗಳನ್ನು ಸಾಗಿಸುವ ಲಾರಿಗೆ ಹಿಂಬದಿಯಿಂದ ಬರುತ್ತಿದ್ದ ಡಾಮರು ಟಿಪ್ಪರ್ ಲಾರಿ ಚಾಲಕನ ಅಜಾಗರೂಕತೆಯಿಂದ ಡಿಕ್ಕಿ ಹೊಡೆದಿದೆ.  ಲಾರಿಯಲ್ಲಿದ್ದ ಕ್ಲೀನರ್ ಯೂಸುಫ್ ಎಂಬವರ ಕೈ ಕಾಲುಗಳ ಮೇಲೆ ಡಾಮರು ಬಿದ್ದಿದ್ದು ಗಂಭೀರವಾಗಿ ಗಾಯಗೊಂಡಿದ್ದು,ಇನ್ನೊಂದು ಲಾರಿಯ ಚಾಲಕ ರಿಜ್ವಾನ್ ಹಾಗೂ ಅಲ್ಪಾಸ್ ಎಂಬವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಡಿಕ್ಕಿಯ ರಭಸಕ್ಕೆ ಎರಡು ಟಿಪ್ಪರ್ ಲಾರಿಗಳು ಆಳೆತ್ತರದಲ್ಲಿದ್ದ ಅಡಿಕೆ ತೋಟಕ್ಕೆ ಪಲ್ಟಿಯಾಗಿ ಬಿದ್ದಿದೆ ಮತ್ತು ಟಿಪ್ಪರ್ ಲಾರಿಯಲ್ಲಿದ್ದ ಬಿಸಿಬಿಸಿ ಡಾಮರು ಮಿಶ್ರಿತ ಜಲ್ಲಿ ಮತ್ತು ಕೆಂಪು ಕಲ್ಲು ಸಾಗಿಸುವ ಲಾರಿ ಚಾಲಕನ ಮೈ ಮೇಲೆ ಬಿದ್ದು ಬೆಂದುಹೋಗಿದೆ. ಕೂಡಲೇ ಮಂಗಳೂರು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಬಿಸಿಯಾದ ಡಾಮರುನಲ್ಲಿ ಬೆಂದು ಹೋಗಿದ್ದ ಚಾಲಕ ರಫೀಕ್ ಮೃತಪಟ್ಟಿದ್ದಾರೆ.ಜತೆಗೆ ಇದ್ದ ಕ್ಲೀನರ್ ಯೂಸುಫ್ ನ ಮೇಲೆಯೂ ಡಾಮರು ಬಿದ್ದಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಸಜೀಪನಡುವಿಲ್ಲಿ ರಸ್ತೆಗೆ ಡಾಮರು ಹಾಕುವ ಉದ್ದೇಶದಿಂದ ಡಾಮರು ಸಾಗಿಸುವ ವೇಳೆ ಘಟನೆ ನಡೆದಿದೆ.ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯತನದ ಚಾಲನೆ ಹಾಗೂ ಅಜಾಗರೂಕತೆಯೆ ಕಾರಣ ಎನ್ನಲಾಗಿದೆ.

ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ.ಸುತೇಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article