ಕೇರಳಕ್ಕೆ ಕಾಲಿಟ್ಟ ಮುಂಗಾರು: ಮೇ 28ರ ವರೆಗೆ ಕರಾವಳಿಗೆ ಭಾರೀ ಮಳೆಯ ಮುನ್ಸೂಚನೆ

ಕೇರಳಕ್ಕೆ ಕಾಲಿಟ್ಟ ಮುಂಗಾರು: ಮೇ 28ರ ವರೆಗೆ ಕರಾವಳಿಗೆ ಭಾರೀ ಮಳೆಯ ಮುನ್ಸೂಚನೆ

ಮಂಗಳೂರು: ಕೇರಳಕ್ಕೆ ಈ ಬಾರಿ ವಾಡಿಕೆಗಿಂತ ಮೊದಲೇ ಮುಂಗಾರು ಎಂಟ್ರಿ ಕೊಟ್ಟಿದೆ. 16 ವರ್ಷಗಳ ಬಳಿಕ ಮೇ 24ರಂದೇ ಮುಂಗಾರು ಆಗಮಿಸಿದ್ದನ್ನು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

ಈ ಹಿಂದೆ 2009ರಲ್ಲಿ ಮೇ 23ರಂದು ಮುಂಗಾರು ಮಳೆ ಕೇರಳಕ್ಕೆ ಆಗಮಿಸಿತ್ತು. ಈ ಬಾರಿ ಮುಂಗಾರು ಅರಬ್ಬೀ ಸಮುದ್ರ ಕಡೆಯಿಂದ ಕೇರಳಕ್ಕೆ ಅಧಿಕೃತ ಎಂಟ್ರಿಯಾಗಿದ್ದು ತಮಿಳುನಾಡು, ಬಂಗಾಳ ಕೊಲ್ಲಿಗೂ ಮಾರುತಗಳು ಹಬ್ಬುತ್ತಿರುವುದನ್ನು ಹವಾಮಾನ ಇಲಾಖೆ ಮಾಹಿತಿ ನೀಡಿದೆ. 

ಇದಕ್ಕೂ ಮುನ್ನ 1990ರಲ್ಲಿ ಮೇ ೧೯ರಂದು ಮಾನ್ಸೂನ್ ಕೇರಳಕ್ಕೆ ಕಾಲಿಟ್ಟಿದ್ದ ಬಗ್ಗೆ ಉದಾಹರಣೆ ಇದೆ. 2016 ಮತ್ತು 2023ರಲ್ಲಿ ಮಳೆ ವಿಳಂಬಗೊಂಡು ಜೂನ್ 8ರಂದು ಮುಂಗಾರು ಆಗಮಿಸಿತ್ತು.

ಅರಬ್ಬೀ ಸಮುದ್ರ ಕಡೆಯಿಂದ ಮಾನ್ಸೂನ್ ಮಾರುತಗಳು ಕೇರಳ, ತಮಿಳುನಾಡು ಮೂಲಕ ಬಂಗಾಳ ಕೊಲ್ಲಿಗೆ ಧಾವಿಸುತ್ತಿರುವುದನ್ನು ಹವಾಮಾನ ಇಲಾಖೆ ಗ್ರಾಫಿಕ್ಸ್‌ನಲ್ಲಿ ತೋರಿಸಿದೆ. ಇದೇ ವೇಳೆ, ಕೇರಳದ ಮೂಲಕ ಮಾನ್ಸೂನ್ ಕರ್ನಾಟಕ ಕರಾವಳಿಗೂ ಒಂದು ದಿನದ ಅಂತರದಲ್ಲಿ ಎಂಟ್ರಿಯಾಗುವ ಸಾಧ್ಯತೆಯಿದೆ. ಇದಲ್ಲದೆ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಮೇ 28ರ ವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article